ದಾವಣಗೆರೆ, ಮಾ. 15 – ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ವೃತ್ತಿಪರ ನಿರ್ದೇಶಕರುಗಳಾಗಿ ಹಿರಿಯ ನ್ಯಾಯವಾದಿ ಹೆಚ್. ದಿವಾಕರ್ ಮತ್ತು ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ಬಿ.ಹೆಚ್. ಮಂಜಪ್ಪ ಅವರುಗಳು ನೇಮಕಗೊಂಡಿದ್ದಾರೆ.
ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ದಿವಾಕರ್ ಮತ್ತು ಮಂಜಪ್ಪ ಅವರುಗಳನ್ನು ಕೋ-ಆಪ್ ಮಾಡಿಕೊಳ್ಳಲಾಯಿತು.