ಮಲೇಬೆನ್ನೂರು, ಫೆ. 10 – ಯಲವಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಕಮಲಾಪು ರದ ಮಲ್ಲಿಕಾರ್ಜುನಪ್ಪ ಬಾವಿಕಟ್ಟಿ ಮತ್ತು ಉಪಾಧ್ಯಕ್ಷರಾಗಿ ಯಲವಟ್ಟಿಯ ಹೀರಾನಾಯ್ಕ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಶಶಿಧರ್ ಕಾರ್ಯನಿರ್ವಹಿಸಿದರು. ಪಿಡಿಓ ರಾಮನಗೌಡ, ಬಿಲ್ ಕಲೆಕ್ಟರ್ ಪವನ್ ಹಾಜರಿದ್ದರು.
March 1, 2025