ಜಗಳೂರು, ಫೆ.9- ಹನುಮಂತಾಪುರ ಗ್ರಾ.ಪಂ.: ಹನುಮಂತಾಪುರ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್ಸಿ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಜಗಳೂರು ಗೊಲ್ಲರಹಟ್ಟಿ ರವಿರಾಜ ಶೇಖರಗೌಡ ಅವರು ಒಟ್ಟು 27 ಮತದಾನ ಸದಸ್ಯರಲ್ಲಿ 14 ಮತ ಗಳಿಸಿ, ಗೆಲುವು ಸಾಧಿಸಿದ್ದಾರೆ. ಮಮತಾ ಅವರು 12 ಮತ ಪಡೆದು ಪರಾಜಿತಗೊಂಡರು. 1 ಮತ ತಿರಸ್ಕೃತಗೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ 14 ಮತ ಗಳಿಸಿ ಗೆಲುವು ಸಾಧಿಸಿದರೆ ಭಾರತಿ 13 ಮತ ಗಳಿಸಿ ಪರಾಭವಗೊಂಡರು ಎಂದು ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಬೀರೇಂದ್ರ ಅವರು ಘೋಷಿಸಿದರು.
ಬಿಸ್ತುವಳ್ಳಿ ಗ್ರಾ.ಪಂ. : ಬಿಸ್ತುವಳ್ಳಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ 10 ಮತ ಗಳಿಸಿ, ಗೆಲುವು ಸಾಧಿಸಿದರೆ, ಇಂದ್ರಮ್ಮ 7 ಮತ ಪಡೆದು, ಪರಾಭವಗೊಂದರೆ 1 ತಿರಸ್ಕೃತಗೊಂಡಿತು. ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ನಾಗವೇಣಿ ಅವರು ತಿಳಿಸಿದ್ದಾರೆ.
ಅಸಗೋಡು ಗ್ರಾ.ಪಂ : ಅಸಗೋಡು ಗ್ರಾ.ಪಂ ಸಾಮಾನ್ಯ ಮೀಸಲು ಕ್ಷೇತ್ರದಿಂದ ಅಧ್ಯಕ್ಷರಾಗಿ ಲಲಿತಮ್ಮ, ಉಪಾಧ್ಯಕ್ಷರಾಗಿ ಎಸ್‌ಟಿ ಮೀಸಲು ಕ್ಷೇತ್ರದಿಂದ ನಾಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯಾಗಿದ್ದ ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ ತಿಳಿಸಿದ್ದಾರೆ.
ಸೊಕ್ಕೆ ಗ್ರಾ.ಪಂ : ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸ್ವಾತಿ ಹಾಗೂ ಉಪಾಧ್ಯಕ್ಷರಾಗಿ ಮಂಜಪ್ಪ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 17 ಜನ ಗ್ರಾ.ಪಂ. ಸದಸ್ಯರಿದ್ದು, ಒಮ್ಮತದಿಂದ ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದ ಅಧ್ಯಕ್ಷರ ಸ್ಥಾನಕ್ಕೆ ಸ್ವಾತಿ ಹಾಗೂ ಎಸ್ಸಿ ಸಾಮಾನ್ಯ ಕ್ಷೇತ್ರದ ಉಪಾಧ್ಯಕ್ಷ ಸ್ಥಾನಕ್ಕೆ ಮಂಜಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಘೋಷಿಸಿದರು.
ಹೊಸಕೆರೆ ಗ್ರಾ.ಪಂ. : ಹೊಸಕೆರೆ ಗ್ರಾ.ಪಂ. ನೂತನ ಎಸ್‌ಟಿ ಮಹಿಳಾ ಮೀಸಲು ಸ್ಥಾನಗಳ ಅಧ್ಯಕ್ಷ ಸ್ಥಾನಕ್ಕೆ ಗಡಿಮಾಕುಂಟೆ ಬೋರಮ್ಮ 10 ಮತ ಗಳಿಸಿ, ಗೆಲುವು ಸಾಧಿಸಿದರೆ ಲಕ್ಷ್ಮಮ್ಮ 8 ಮತ ಪಡೆದು ಪರಾಜಿತಗೊಂಡರು. ಉಪಾಧ್ಯಕ್ಷರಾಗಿ ಚೌಡಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 18 ಜನ ಸದಸ್ಯರಿದ್ದು, ಸರ್ವಾನುಮತದಿಂದ ಬೆಂಬಲಿಸಿ, ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶಿವಕುಮಾರ್ ಘೋಷಿಸಿದರು.
ಕಲ್ಲೇದೇವರಪುರ ಗ್ರಾ.ಪಂ. : ಕಲ್ಲೇದೇವರಪುರ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ವಸಂತಕುಮಾರಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಶ್ರೀಮತಿ ಚಂದ್ರಮ್ಮ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.