ಹರಪನಹಳ್ಳಿ, ಫೆ. 18- ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ತಾಲ್ಲೂಕಿನ ಬಿಜೆಪಿ ಮುಖಂಡ ಕೆ. ರಾಘವೇಂದ್ರ ಶೆಟ್ಟಿ ಅವರು ನಾಮ ನಿರ್ದೇಶಕ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಆಸ್ಪತ್ರೆಗೆ ಒಟ್ಟು ಆರು ಜನ ಸದಸ್ಯರನ್ನು ಸಮಿತಿಗೆ ನೇಮಕ ಮಾಡಿ ಆದೇಶಿಸಲಾಗಿದೆ. ಬಿ.ಇ. ಬೀರಬ್ಬಿ ಬಸವರಾಜ್ ಹಡಗಲಿ, ಎಸ್. ಬಾಲಸುಬ್ರಹ್ಮಣ್ಯ ಸಂಡೂರು, ಗೋಗಿನೇನಿ ವೆಂಕಟಸುಬ್ಬರಾವ್ ಸಿರಗುಪ್ಪ, ಎಸ್.ವಿ. ಹನುಮಂತಪ್ಪ ಕೊಟ್ಟೂರು, ಶ್ರೀಮತಿ ಟಿ. ರುಬಿಯಾ ಕಂಪ್ಲಿ ಅವರುಗಳನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
February 23, 2025