ದಾವಣಗೆರೆ,ಮಾ.26- ನಗರದ ರಾಷ್ಟ್ರೀಯ ಹೆದ್ದಾರಿ 4ರ ಹಳೇಬಾತಿಯ ಬ್ರಿಡ್ಜ್ ಬಳಿ ಇಂದು ರಾತ್ರಿ 11.30ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಳೇಕುಂದುವಾಡದ ರೈತ ಮಿಟ್ಲಕಟ್ಟೆ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ.
ಕಾರ್ಯ ನಿಮಿತ್ತ್ಯ ಹರಿಹರಕ್ಕೆ ಹೋಗಿ, ವಾಪಸ್ ತಮ್ಮ ಮೋಟಾರ್ ಬೈಕಿನಲ್ಲಿ ಹಳೇಬಾತಿ ಮುಖಾಂತರ ಹಳೇಕುಂದುವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮವಾಗಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.
ಮೃತರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 27ರ ಶನಿವಾರ ಮಧ್ಯಾಹ್ನ 2 ಗಂಟೆಗೆೆ ಹಳೇಕುಂದುವಾಡದಲ್ಲಿ ನಡೆಯಲಿದೆ.