ದಾವಣಗೆರೆ, ಮಾ. 17- ದೇವಸ್ಥಾನದ ಹುಂಡಿ ಒಡೆದು ನಗದು-ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಚಿಕ್ಕಕೋಗಲೂರು ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ಶ್ರೀ ಈಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿರುವ ಹಣ, ದೇವರ ಆಭರಣಗಳನ್ನಷ್ಟೇ ಅಲ್ಲದೇ ಗುರುತು ಸಿಗದಂತೆ ಮಾಡಲು ದೇವಸ್ಥಾನದಲ್ಲಿ ಹಾಕಿರುವ ಸಿಸಿ ಟಿವಿ ಮಾನಿಟರ್, ಡಿವಿಆರ್ ಬಾಕ್ಸ್ ಗಳನ್ನು ಸಹ ಚಾಲಾಕಿ ಕಳ್ಳರು ಕಳ್ಳತನ ಮಾಡಿದ್ದು, ಸ್ಥಳಕ್ಕೆ ಸಂತೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಶಿವರುದ್ರಪ್ಪ ಮೇಟಿ ಭೇಟಿ ನೀಡಿ ಪರಿಶೀಲಿ ಸಿದ್ದು, ಶ್ವಾನ ದಳ, ಬೆರಳಚ್ಚು ತಂಡದಿಂದ ಪರಿಶೀಲನೆ ನಡೆಸಲಾಗಿದೆ.
ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.