ಹರಪನಹಳ್ಳಿ, ಮಾ.17- ಕಟ್ಟಿಗೆಯಿಂದ ತಲೆಗೆ ಹೊಡೆದು ಮಾವನೇ ಅಳಿಯನನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ.
ಹಾಲೇಶ (31) ಕೊಲೆಯಾದ ವ್ಯಕ್ತಿ. ಮಾವ ಕುಮಾರ ಎಂಬುವವರ ತಂಗಿಯನ್ನು ಮೃತ ಹಾಲೇಶ ವಿವಾಹವಾಗಿದ್ದು, ಹಾಲೇಶ್ ಹಾಗೂ ಆತನ ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಕುಮಾರ್ ತನ್ನ ತಂಗಿಯ ಪರವಾಗಿ ಅಳಿಯ ಹಾಲೇಶ್ ಜೊತೆ ಜಗಳವಾಡಿ, ಅಳಿಯ ಹಾಲೇಶನ ತಲೆಗೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಹಾಲೇಶನನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಆರೋಪಿ ಕುಮಾರ ತಲೆ ಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಸಿಪಿಐ ನಾಗರಾಜ ಕಮ್ಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲುವಾಗಲು ಪಿಎಸ್ಐ ಪ್ರಶಾಂತ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.