ದಾವಣಗೆರೆ, ಜು.29- ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಹೆಂಡತಿಯು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಘಟನೆ ನಡೆದಿದೆ.
ಚನ್ನಗಿರಿ ತಾಲ್ಲೂಕು ವಿ. ಬನ್ನಿಹಟ್ಟಿ ಗ್ರಾಮದ ಲೋಕೇಶ್ (38) ಕೊಲೆಯಾದ ವ್ಯಕ್ತಿ. ಕುಸುಮಾ ಮತ್ತು ಮೃತ ಲೋಕೇಶ್ ಗೆ ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿತ್ತು.
ಕಳೆದ 2 ವರ್ಷಗಳ ಹಿಂದೆ ಕುಸುಮಾಗೆ ಪ್ರಭು ಎಂಬ ವ್ಯಕ್ತಿ ಪರಿಚಯವಾಗಿದ್ದು, ಇಬ್ಬರ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಗಂಡನಿಗೆ ತಿಳಿಯುತ್ತದೆ ಮತ್ತು ಇಬ್ಬರ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗಬಹುದು ಎಂದು ಕೊಲೆ ಸಂಚು ರೂಪಿಸಿದ್ದರು.
ಬುಧವಾರ ರಾತ್ರಿ ಕುಸುಮಾ ಮತ್ತು ಪ್ರಿಯಕರ ಪ್ರಭು ಸೇರಿ ಮಲಗಿದ್ದ ಗಂಡ ಲೋಕೇಶ್‌ನಿಗೆ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಇದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದರೆ, ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಹೆಂಡತಿ ಕುಸುಮಾ ಮತ್ತು ಪ್ರಿಯಕರ ಪ್ರಭು ಪೊಲೀಸರ ಅತಿಥಿಯಾಗಿದ್ದಾರೆ.