ದಾವಣಗೆರೆ, ಜು.22- ಮನೆಗೆ ಕನ್ನ ಹಾಕಿರುವ ಕಳ್ಳರು 84 ಸಾವಿರ ರೂ. ಮೌಲ್ಯದ ಚಿನ್ನಾಭರಣ, 17 ಸಾವಿರ ನಗದು ಸೇರಿ ಒಟ್ಟು ಒಂದು ಲಕ್ಷದ ಐದು ಸಾವಿರದಷ್ಟು ಕಳವು ಮಾಡಿರುವ ಘಟನೆ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೇ ದಿನಾಂಕ 20 ರಂದು ಅರುಣ್‌ಕುಮಾರ್ ಅವರ ತಾಯಿ ಗಾಯತ್ರಿ ಹಿರಿಯೂರಿಗೆ ಹೋಗಿದ್ದು, ಆತನ ತಂದೆಯು ಲೋಕಿಕೆರೆಯ ಮನೆ ಯ ಬೀಗವನ್ನು ಹಾಕಿಕೊಂಡು ದಾವಣ ಗೆರೆಗೆ ಬಂದಿದ್ದರು. ಈ ಸಮಯದಲ್ಲಿ ಬೀಗ ಹಾಕಿದ್ದ ಮನೆಯ ಮೇಲ್ಚಾವಣೆಯ ತಗಡನ್ನು ತೆಗೆದು ಅದರೊಳಗಿಳಿದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.
January 11, 2025