ಕಳ್ಳತನ : ಚಿನ್ನಾಭರಣಗಳ ಸಮೇತ ಬಂಧನ

ಮಲೇಬೆನ್ನೂರು, ಜು.14- ಗೋವಿನಹಾಳ್‌ ಸೇರಿ 4 ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದ ಎನ್ನಲಾದ ಆರೋಪಿಯನ್ನು ಬಂಧಿಸಿರುವ ಮಲೇಬೆನ್ನೂರು ಠಾಣೆ ಪೊಲೀಸರು, ಬಂಧಿತನಿಂದ 4.32 ಲಕ್ಷರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರು,  ಬಂಧಿತನಾಗಿರುವ ಹುಬ್ಬಳ್ಳಿ ಮೂಲದ ನಂದೀಶ್‍ ಸಕ್ರಪ್ಪನವರ್‌ ಸದ್ಯ ಉಕ್ಕಡಗಾತ್ರಿಯಲ್ಲಿ ವಾಸವಾಗಿದ್ದಾನೆ ಎಂದು ಹೇಳಿದರು. ಗೋವಿನಹಾಳ್‌ ಗ್ರಾಮದ ಚಂದ್ರಪ್ಪ ಅವರ ಮನೆಯಲ್ಲಿ ಮೇ 29ರ ರಾತ್ರಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. 

ಉಕ್ಕಡಗಾತ್ರಿ, ಕೆ.ಎನ್‍. ಹಳ್ಳಿ, ಭಾನುವಳ್ಳಿ ಗ್ರಾಮ ಗಳಲ್ಲೂ ಕಳ್ಳತನ ಮಾಡಿರುವುದಾಗಿ ಬಂಧಿತನು ಪೊಲೀಸರ ಮುಂದೆ ತಿಳಿಸಿದ್ದಾನೆ.  

ಬೆರಳು ಮುದ್ರೆ ಘಟಕದ ಡಿವೈಎಸ್ಪಿ ರುದ್ರೇಶ್ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಯು. ಸತೀಶ್‍ಕುಮಾರ್ ನೇತೃತ್ವದಲ್ಲಿ ಮಲೇಬೆ ನ್ನೂರು ಪಿಎಸ್ ಐ ವೀರಬಸಪ್ಪ ಕುಸಲಾಪುರ, ಬೆರಳು ಮುದ್ರೆ ಘಟಕದ ಪಿ.ಎಸ್‍ಐ ಮಂಜು ನಾಥ್‍ ಎಸ್‍ ಕಲ್ಲೇದೇವರು, ಪ್ರೊಬೆಷನರಿ ಪಿ.ಎಸ್‍ ಐ ಶರಣಬಸಪ್ಪ,  ಸಿಬ್ಬಂದಿಗಳಾದ ನಾಗರಾಜ್, ಕೆ. ಶಿವಕು ಮಾರ್, ಎಸ್.ಬಿ.‌ರಾಜಪ್ಪ, ಆರ್. ಲಕ್ಷ್ಮಣ್, ವೆಂಕಟರಮಣ, ಟಿ.ವಿ. ವಿನಾಯಕ, ಎ.ಬಿ. ರಾಜಶೇಖರ್, ಟಿ. ಬಸವರಾಜ್, ಹನು ಮಂತ ರೆಡ್ಡಿ, ಟಿ.ಹೆಚ್‍ ಮಲ್ಲಿಕಾರ್ಜುನ್, ಹೆಚ್.ಎಸ್. ರಂಗಪ್ಪ, ಜೆ.ಎಸ್. ಮೂರ್ತಿ, ಟಿ.ಎನ್.‌ ಶಿವಕುಮಾರ್ ಅವರುಗಳು   ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!