ಹರಿಹರದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಹರಿಹರ, ಫೆ.17- ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಮೊನ್ನೆ ಸುಮಾರು 45-50 ವರ್ಷದೊಳಗಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಅಪರಿಚಿತ ಮಹಿಳೆಯು ಸುಮಾರು ದಿನಗ ಳಿಂದ ಭಿಕ್ಷೆ ಬೇಡಿಕೊಂಡು ಸುತ್ತಾಡುತ್ತಿದ್ದವಳು ಯಾವುದೋ ಖಾಯಿಲೆಯಿಂದಲೋ ಅಥವಾ ವಯೋ ಸಹಜವಾಗಿ ಮೃತಪಟ್ಟಿದ್ದು, ಕೆಎಸ್‌ಆ ರ್‌ಟಿಸಿ ಸ್ಟ್ಯಾಂಡ್ ಇನ್‌ಚಾರ್ಜರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಮಹಿಳೆಯು ದುಂಡು ಮುಖ, ತೆಳುವಾದ ಮೈಕಟ್ಟು, ತಲೆಯಲ್ಲಿ 7-8 ಇಂಚು ಕಪ್ಪು-ಬಿಳಿ ಕೂದಲು ಚಹರೆ ಹೊಂದಿದ್ದು, ಬಲಗೈಯಲ್ಲಿ ಶಾಂತ ಹಾಗೂ ರತ್ನಮ್ಮ ಎಂದು ಅಚ್ಚೆ ಗುರುತು ಇರುತ್ತದೆ. ಎಡಗಡೆ ಸೊಂಟದಲ್ಲಿ ರಾಗಿಕಾಳು ಗಾತ್ರದ ಮಚ್ಚೆ ಗುರುತು ಇರುತ್ತದೆ. ಗಿಣಿ ಹಸಿರು ಬಣ್ಣದ ಸೀರೆ ಮತ್ತು ಮ್ಯಾಚಿಂಗ್ ಜಾಕೀಟ್, ಅದರ ಮೇಲೆ ಬಿಳಿ ಕಂದು ಮಿಶ್ರಿತ ಫುಲ್‌ತೋಳಿನ ಅಂಗಿ ಇರುತ್ತದೆ. ಎರಡೂ ಕೈಯಲ್ಲಿ ಹಸಿರು ಬಳೆ, ಕೊರಳಲ್ಲಿ ಕರಿಮಣಿ ಸರ ಮತ್ತು ಕೆಂಪು ದಾರ ಇರುತ್ತದೆ.

ಸಂಬಂಧಪಟ್ಟವರು ನಗರ ಠಾಣೆಯನ್ನು ಸಂಪರ್ಕಿಸಬಹುದು. ದೂರವಾಣಿ 08192-272016, 9480803257.

error: Content is protected !!