ಕೂಡ್ಲಿಗಿ,ಫೆ. 16- ಕೆರೆಕಾವಲರಹಟ್ಟಿ ಗ್ರಾಮದ ಯುವಕನೋರ್ವ ವಾಹನ ಹರಿದು ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಜರುಗಿದೆ. ಕೆ.ಕೆ. ಹಟ್ಟಿ ಮಾರೇಶ (18) ಮೃತ ದುರ್ದೈವಿಯಾಗಿದ್ದಾನೆ. ಈತನು ತನ್ನ ಗ್ರಾಮದಿಂದ ಎಂದಿನಂತೆ ಕೂಡ್ಲಿಗಿ ಪಟ್ಟಣಕ್ಕೆ ನಂದಿನಿ ಹಾಲು ತರಲು ಬೈಕ್ನಲ್ಲಿ ತೆರಳಿದಾಗ ಮಾರ್ಗ ಮಧ್ಯ ಅಪರಿಚಿತ ವಾಹನ ಹಾಗು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ನಡೆದಿದೆ.
December 27, 2024