ದಾವಣಗೆರೆ, ಫೆ.1- ನಗರದಲ್ಲಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆ ಸಹಯೋಗದ ತಂಡಗಳು ಮೊನ್ನೆ ನಗರದ ವಿವಿಧ ಅಂಗಡಿ, ಹೋಟೆಲ್ ಗಳ ಮೇಲೆ ದಾಳಿ ಮಾಡಿ ದುಡಿಯುವ 4 ಗಂಡು ಮಕ್ಕಳನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆ ಮಾಡಿವೆ.
ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ 2 ತಂಡಗಳು ಕಾರ್ಯ ಕೈಗೊಂಡು, ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಯಿತು.
ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕಾರ್ಮಿಕ ನಿರೀಕ್ಷಕರು, 123 ನೇ ವೃತ್ತ ರಾಜಶೇಖರ್ ಹಿರೇಮಠ, ಆರ್. ನಾಗೇಶ್, ಟಿ. ರಾಜಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕವಿತಾಕುಮಾರಿ, ಎಸ್‌ಸಿಎಲ್‌ಪಿ ಯೋಜನಾ ನಿರ್ದೇಶಕ ಇ.ಎನ್. ಪ್ರಸನ್ನ ಹಾಗೂ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು.
ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಯಿತು. 14 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಂಡಿದ್ದು ಕಂಡುಬಂದಿಲ್ಲ, ಮಕ್ಕಳ ಸಹಾಯವಾಣಿ-1098, ಇಲಾಖೆ ದೂರವಾಣಿ ಸಂಖ್ಯೆ: 08192-237332, 230094 ಸಂಪರ್ಕಿಸುವುದು.