
ಉತ್ತಮ ರಾಜಕಾರಣಿ ಆಯ್ಕೆ ಜನರ ಹೊಣೆ
ವೈದ್ಯರಾದರೆ ವೈದ್ಯಕೀಯ ಕ್ಷೇತ್ರವನ್ನು, ಶಿಕ್ಷಕರಾದರೆ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಬಹುದು. ಆದರೆ ರಾಜಕಾರಣಿಗಳಾದರೆ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ತರಬಹುದು.
ವೈದ್ಯರಾದರೆ ವೈದ್ಯಕೀಯ ಕ್ಷೇತ್ರವನ್ನು, ಶಿಕ್ಷಕರಾದರೆ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಬಹುದು. ಆದರೆ ರಾಜಕಾರಣಿಗಳಾದರೆ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ತರಬಹುದು.
ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3ರಿಂದ 21ರವರೆಗೆ ಎರಡು ಹಂತದಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಜಂಟಿ ಸದನ ಉದ್ದೇಶಿಸಿ ಅಧಿವೇಶನದ ಮೊದಲ ದಿನ ಮಾತನಾಡಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 20 ರವರೆಗೆ ನಡೆಯುತ್ತದೆ. ಪರೀಕ್ಷಾ ಕಾರ್ಯ ದಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸ ಬೇಕೆಂದು ಅಪರ ಜೀಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ರಾಣೇಬೆನ್ನೂರು : ಬಾಕಿ ಉಳಿದ 9 ತಿಂಗಳ ಅವಧಿಗೆ ಅಧ್ಯಕ್ಷ ಗಾದಿಯಲ್ಲಿ ಕುಳಿತಿರುವ ಚಂಪಕ ಬಿಸಲಳ್ಳಿ ಅವರು ತಮ್ಮ ಮೊದಲ ಸಭೆಯಲ್ಲಿಯೇ 2025ರ ಆಯ-ವ್ಯಯ ಮಂಡಿಸಿ, 1.74 ಕೋಟಿ ರೂ. ಉಳಿತಾಯ ಮಾಡುತ್ತಿರುವುದಾಗಿ ಘೋಷಿಸಿದರು.
ಮಲೇಬೆನ್ನೂರು : ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಜಮೀನುಗಳಿಗೆ ಇನ್ನೂ ಸಮರ್ಪಕವಾಗಿ ನೀರು ಹರಿದು ಬರುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಲಸ್ಟರ್ ಮಟ್ಟದ ಎಫ್ಎಲ್‌ಎನ್ ಕಲಿಕಾ ಹಬ್ಬವು ಸ್ಥಳೀಯ ಹಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರುಗಿತು. ಕ್ಲಸ್ಟರ್‌ನ ಸರ್ಕಾರಿ ಶಾಲೆಗಳಿಂದ ಒಂದರಿಂದ ಐದನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳು ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಹರಿಹರ : ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡರೆ ಅಗಾಧ ಜ್ಞಾನ ಸಂಪಾದಿಸಬಹುದು ಎಂದು ಹಿರಿಯ ಸಾಹಿತಿ ಬಾ.ಮ ಬಸವರಾಜಯ್ಯ ಪ್ರತಿಪಾದಿಸಿದರು.
ನೌಕರರು, ಕಾರ್ಮಿಕರಿಗೆ ವೇತನ ಪಾವತಿ ಮತ್ತು ಕಾನೂನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ನಿಗಮವನ್ನು ನೂತನವಾಗಿ ಸ್ಥಾಪಿಸಲಾಗಿದೆ
ಜಿಲ್ಲಾ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿ ನೂತನ `ಭವಾನಿ ಕಲ್ಯಾಣ ಮಂಟಪ’ ಉದ್ಘಾಟನೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದರು.
ನಗರದ ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್, ಅಥಣಿ ಕಾಲೇಜು ಹಾಗೂ `ಚಿರಂತನ ಅಕಾಡೆಮಿ’ ಸಹಯೋಗದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 23 ರ ಭಾನುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ – ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ನೀಲಾನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಕಾರಣಿಕೋತ್ಸವವು ಬರುವ ಮಾರ್ಚ್ 5ರ ಬುಧವಾರ ನಡೆಯಲಿದೆ