ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಲು ಡಾ.ಶಿವಕುಮಾರ ಕರೆ

ರಾಣೇಬೆನ್ನೂರು, ಏ.1- ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸು ಸಾಧಿಸಲು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನದ ತಿಳುವಳಿಕೆ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು  ಪ್ರಾಂಶುಪಾಲ  ಡಾ.ಬಿ. ಶಿವಕುಮಾರ ತಿಳಿಸಿದರು. 

ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಗ್ರ್ಯಾಜುಯೇಷನ್ ಡೇ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,   ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು. 

ಡೀನ್ ಅಕಾಡೆಮಿಕ್ ಡಾ.ಡಿ.ಎಸ್. ವಿಶ್ವನಾಥ್ ಹಾಗೂ  ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ.ಸಿ.ಎಂ.ಪರಮೇಶ್ವರಪ್ಪ , ಡಾ.ಎಸ್.ಜಿ. ಮಾಕನೂರು, ಡಾ.ಬಿ.ಮಹೇಶ್ವರಪ್ಪ,  ಡಾ.ಜೆ.ಓ.ಕಿರಣ್, ಪ್ರೊ.ಡಿ.ಎಸ್.ಮಾಗನೂರು, ಪ್ರೊ.ಎಸ್.ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಡಾ.ಡಿ.ಎಸ್.ವಿಶ್ವನಾಥ್ ಸ್ವಾಗತಿಸಿದರು. ಪ್ರೊ.ಡಿ.ವಿ.ಪೂರ್ಣಿಮಾ ವಂದಿಸಿದರು.

error: Content is protected !!