ಇದು ತಮ್ಮ ರಾಜಕೀಯ ಜೀವನದ ಕೊನೆ ಚುನಾವಣೆ

ಇದು ತಮ್ಮ ರಾಜಕೀಯ ಜೀವನದ ಕೊನೆ ಚುನಾವಣೆ

ಹೊನ್ನಾಳಿ, ಮಾ. 14 –  ಬರುವ ವಿಧಾನಸಭೆ ಚುನಾವಣೆಯು ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಿದ್ದು, ಪಕ್ಷವು ತಮಗೆ ಈ ಬಾರಿ ಅವಕಾಶ ಕಲ್ಪಿಸುವಂತೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಕೇಳಿಕೊಂಡರು.

ಹೊನ್ನಾಳಿಯ ಖಾಸಗಿ ಲೇಔಟ್‍ನಲ್ಲಿ ಮೊನ್ನೆ ಆಯೋಜಿಸಲಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ  ಟಿಕೆಟ್ ಆಕಾಂಕ್ಷಿಗಳ ಪರವಾಗಿ  ಅವರು ಮಾತನಾಡಿದರು. 

1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 29800 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೆ. ಅಂದು 139 ಕಾಂಗ್ರೆಸ್ ಅಭ್ಯರ್ಥಿಗಳು  ಗೆದ್ದಿದ್ದು 11 ಜನ ಪಕ್ಷೇತರರಲ್ಲಿ ತಾನೂ ಕೂಡ ಒಬ್ಬನಾಗಿದ್ದೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು  ಇಂದಿಗೂ ಪಕ್ಷದ ನಿಷ್ಟೆಯ ಲ್ಲಿದ್ದು ತಮ್ಮ ಜೀವಿತಾವಧಿಯವರೆಗೆ ಜನಸೇ ವೆಯೇ ತಮ್ಮ ಉಸಿರಾಗಿದೆ ಎಂದು ಹೇಳಿದರು. 

ಹಾಲಿ ಶಾಸಕ ರೇಣುಕಾಚಾರ್ಯ  ಆಡಳಿ ತಾವಧಿಯಲ್ಲಿ ಜನತೆಯ ನೆಮ್ಮದಿ ಮರೀಚಿಕೆ ಯಾಗಿದ್ದು ಸಿದ್ದರಾಮಯ್ಯ ಕಾಲದಲ್ಲಿ 30 ಹಳ್ಳಿ ಗಳಿಗೆ  5500 ನಿವೇಶನ ಕೊಟ್ಟಿದ್ದು ದಾಖಲೆ ಯಾಗಿದೆ. 11800 ಮನೆಗಳನ್ನು ವಸತಿ ರಹಿತರಿಗೆ ನೀಡಲಾಗಿದೆ.  6 ಮುರಾರ್ಜಿ ಶಾಲೆಗಳನ್ನು ಮಂಜೂರು ಮಾಡಿಸಿದ್ದೆ, ತಮ್ಮ ಅಧಿಕಾರ ಅವಧಿಯಲ್ಲಿ  1693.70 ಕೋಟಿ ಅನುದಾನದಲ್ಲಿ ಆಭಿವೃದ್ದಿ ಮಾಡಲಾಗಿದೆ ಎಂದು ವಿವರಿಸಿದರು.

ಪ್ರತಿ ಗ್ರಾಮ ಪಂಚಾಯಿತಿಗೆ 30 ಮನೆಗ ಳಂತೆ 50 ಗ್ರಾಮಪಂಚಾಯಿತಿಗಳಿಗೆ 1500 ಮನೆಗಳು ಮಂಜೂರಾಗಿದ್ದು, ಇವುಗಳನ್ನು ಹಾಲಿ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ದರು. ಶೇ.90ರಷ್ಟು ರೈತರಿಗೆ ಬೆಳೆ ವಿಮೆ ಬಂ ದಿಲ್ಲ. ಪ್ರಸ್ತುತ ಪ್ರತಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.

ತಮ್ಮ ಪಕ್ಷದಲ್ಲಿ ಆಡದೇ ಮಾಡಿದವರು ಅಂದಿನ ಪ್ರಧಾನಿ ಮನ್‍ಮೋಹನ್‍ಸಿಂಗ್,  ಆಡಿ ಮಾಡಿರುವವರು   ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಆಡಿಯೂ ಮಾಡದ ವರು ದೇಶದ ಪ್ರದಾನಿ ನರೇಂದ್ರಮೋದಿ ಎಂದು ಹೇಳುವ ಮೂಲಕ ಮೋದಿಯವರು ಅನೇಕ ಘೋಷಣೆಗಳನ್ನು ಮಾಡಿ ಈಡೇರಿಸದೇ ಇದ್ದಾರೆ ಎಂದು ಲೇವಡಿ ಮಾಡಿದರು. 

ಸುಳ್ಳು ಹೇಳಿ ಪ.ಜಾತಿ ಪ್ರಮಾಣ ಪತ್ರ ಪಡೆಯುವ  ಮೂಲಕ ಶಾಸಕ ಎಂ.ಪಿ. ರೇಣುಕಾಚಾರ್ಯ ಕುಟುಂಬದವರು ಪರಿಶಿಷ್ಟ ಜಾತಿಯವರ ತಟ್ಟೆಯ ಅನ್ನವನ್ನು ಕಸಿಯುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಪರಿಶಿಷ್ಡ ಜಾತಿ ಪಂಗಡದವರು  ಇವರಿಗೆ ತಕ್ಕಪಾಠ ಕಲಿಸಬೇಕಿದೆ  ಎಂದು ಹೇಳಿದರು. 

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಇದ್ದರೆ ನಮ್ಮ ತಾಲ್ಲೂಕಿನಲ್ಲಿ 50 ಪರ್ಸೆಂಟೇಜ್ ಆಡಳಿತವಾಗಿದೆ ಎಂದು ದೂರಿದರು. 

ಕಾರ್ಯಕ್ರಮ ನಡೆಯುವಾಗ ಜೋರಾಗಿ ಬೀಸಿದ ಬಿರುಗಾಳಿಯನ್ನು ಗಮನಿಸಿದ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದು ಕಾಂಗ್ರೆಸ್ ಗಾಳಿಯಾಗಿದ್ದು ಇಂದಿನಿಂದ ಕ್ಷೇತ್ರದಲ್ಲಿ ಬೀಸಲಾರಂಭಿಸಿದೆ, ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಮುನ್ಸೂಚನೆಯಾಗಿದೆ ಎಂದರು..

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಸಚಿವ ಜಮೀರ್‍ ಆಹಮ್ಮದ್,  ಕರ್ನಾಟಕ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಮೋಹನ್‍ಕೊಂಡಜ್ಜಿ, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ತಾ. ಅಧ್ಯಕ್ಷ ಎಚ್.ಬಿ. ಶಿವಯೋಗಿ ಡಾ. ಈಶ್ವರ ನಾಯ್ಕ, ಎಚ್.ಎ. ಉಮಾಪತಿ, ವರದರಾಜಪ್ಪ ಗೌಡ, ಬಿ. ಸಿದ್ದಪ್ಪ, ಎಂ. ರಮೇಶ್, ಎಚ್.ಎ. ಗದ್ದಿಗೇಶ್, ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್, ನ್ಯಾಮತಿ ನುಚ್ಚಿನ ವಾಗೀಶ್, ಸಣ್ಣಕ್ಕಿ ಬಸವಗೌಡ ಮುಂತಾದವರು ಇದ್ದರು.

error: Content is protected !!