ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಂಡು ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ

ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಂಡು ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ

ಹರಪನಹಳ್ಳಿ : ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎನ್.ಎಂ.ನಬೀ ಸಾಬ್

ಹರಪನಹಳ್ಳಿ, ಮಾ.5- ರಾಷ್ಟ್ರೀಯ ಪಕ್ಷಗಳು ಕಳೆದ 75 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಾ ಜನಪ್ರಿಯ ಕೆಲಸಗಳನ್ನು ಮಾಡುವುದನ್ನೇ ಮರೆತಿದ್ದು, ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಳ್ಳುವುದರ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ  ಎನ್.ಎಂ. ನಬೀ ಸಾಬ್ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷಗಳನ್ನು ಕೇರಳ, ತಮಿಳುನಾಡು ಸೇರಿದಂತೆ ಬಹಳಷ್ಟು ರಾಜ್ಯಗಳು ತಿರಸ್ಕಾರ ಮಾಡಿವೆ, ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಪಂಚರತ್ನ ಯೋಜನೆಗಳ ಅನುಷ್ಟಾನಕ್ಕಾಗಿ  ಕುಮಾರಸ್ವಾಮಿ ಯವರ ಕೈ ಬಲಪಡಿಸಲು ಅವರು ಕರೆ ನೀಡಿದರು.

ನಿಯೋಜಿತ ಜೆಡಿಎಸ್ ಅಭ್ಯರ್ಥಿ  ನೂರ್‌ಅಹ್ಮದ್ ಮಾತನಾಡಿ,  ರಾಷ್ಟ್ರೀಯ ಪಕ್ಷಗಳು ಹರಪನಹಳ್ಳಿಯ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲ ವಾಗಿವೆ. ಮೂಲಭೂತ ಸೌಕರ್ಯ ಒದಗಿಸದೇ ಹರಪನಹಳ್ಳಿಯನ್ನು ಮೂಲೆ ಗುಂಪು ಮಾಡಲಾಗಿದೆ. ಹಳ್ಳಿಗಳು ಪ್ರಗತಿ ಹೊಂದಿದ ರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬ ಅರಿವು ಹೊಂದಿ ರುವ ನಾನು ಅದ ಕ್ಕಾಗಿ ಹಲವು ಯೋಜನೆ ಗಳನ್ನು ಕಲ್ಪಿಸಿಕೊಡಲು ಚಿಂತಿಸಿ ದ್ದೇನೆ, ಆದ್ದರಿಂದ ನನಗೆ ಆಶೀರ್ವದಿಸಬೇಕು ಎಂದರು.

 ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ ಮಾತನಾಡಿ, ಸಾಮೂಹಿಕ ನಾಯಕತ್ವದಲ್ಲಿ  ಹೋರಾಟ ಮಾಡಿ ಹರಪನಹಳ್ಳಿಯಲ್ಲಿ ಜೆಡಿಎಸ್ ಗೆಲ್ಲಿಸುತ್ತೇವೆ ಎಂದು ಹೇಳಿದರು.

ಜೆಡಿಎಸ್ ನೂತನ ಕಾರ್ಯಾಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ಪಂಚ ರತ್ನ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದರು.

ಕಂಬಟ್ರಹಳ್ಳಿ  ಪರಮೇಶ್ವರಪ್ಪನವರಿಗೆ ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷರನ್ನಾಗಿ  ನೇಮಕ ಗೊಳಿಸಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೊಟ್ರೇಶಪ್ಪ ಆದೇಶ ಪತ್ರ ನೀಡಿದರು. ಪ್ರಧಾನ ಕಾರ್ಯದರ್ಶಿ ಸಲೀಂ, ಮುಖಂಡರಾದ ಸಯ್ಯದ್ ಕಲಿಂಪಾಷ, ಎಸ್.ಎಚ್. ಸಯ್ಯದ್ ಸೇರಿದಂತೆ, ಇತರರು ಇದ್ದರು. 

error: Content is protected !!