ವ. ಬಸವಾಪುರದಲ್ಲಿ 27ಕ್ಕೆ ರಥೋತ್ಸವ

ವ. ಬಸವಾಪುರದಲ್ಲಿ 27ಕ್ಕೆ ರಥೋತ್ಸವ - Janathavaniಮಲೇಬೆನ್ನೂರು, ಫೆ. 23- ವಡೆಯರ ಬಸವಾಪುರ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 27ರ ಸೋಮವಾರ ಬೆಳಿಗ್ಗೆ 8 ರಿಂದ 12ರವರೆಗೆ ಜರುಗಲಿದೆ.

ದಿನಾಂಕ  26ರ ಭಾನುವಾರ ಬೆಳಿಗ್ಗೆ 8ಕ್ಕೆ ವಿಶೇಷ ಪೂಜೆ, ಅಭಿಷೇಕದ ನಂತರ ಉಚ್ಛಾಯ ಹರಿಸಲಾಗುವುದು. ರಾತ್ರಿ 8ಕ್ಕೆ ಕಂಕಣಧಾರಣೆ ಹಾಗೂ ಕಳಸಾರೋಹಣ ಮಾಡಲಾಗುವುದು. ದಿನಾಂಕ : 27ರ ಸೋಮವಾರ ಬೆಳಿಗ್ಗೆ ರಥೋತ್ಸವದ ನಂತರ ಸಂಜೆ 4 ಗಂಟೆಗೆ ಓಕಳಿ ಇರುತ್ತದೆ. ಸಂಜೆ 7 ಗಂಟೆಗೆ ಗ್ರಾಮದ ಯುವಕರು ಸೇರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

error: Content is protected !!