ದಾವಣಗೆರೆ, ಫೆ. 2 – ನಗರದ ಬೇತೂರು ರಸ್ತೆಯ ದೇವರಾಜ ನಗರದಲ್ಲಿರುವ ಬಂಕಾಪುರದ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿನ್ನೆ ವಯೋ ಸಹಜ ನಿವೃತ್ತಿಯಾದ ಶ್ರೀಮತಿ ಎಸ್.ಸುಧಾರಾಣಿ ಬನ್ನಯ್ಯ ಸ್ವಾಮಿ ಅವರಿಗೆ ಶಾಲೆಯ ಆಡಳಿತ ಮಂಡಳಿಯವರು, ಬೋಧಕ – ಬೋಧಕೇತರರು ಬಿಳ್ಕೊಟ್ಟರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಿಕ್ಷಕಿ ಸುಧಾರಾಣಿ, ತಮಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಲಿಂ. ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು. ಪ್ರಸ್ತುತ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾಸ್ವಾಮಿಗಳ ಪ್ರೋತ್ಸಾಹವನ್ನೂ ನೆನಪು ಮಾಡಿಕೊಂಡರು.
ಈ ಸಂದರ್ಭದಲ್ಲಿ ಲಿಂ. ಬಿ.ಅಶ್ವಿನಿಯವರ ಸವಿನೆನಪಿಗಾಗಿ ಚಿ.ಮಂಥನ್ ಹಿರೇಮಠ ಇವ ರಿಂದ ಮಕ್ಕಳಿಗೆ ಪುಸ್ತಕ, ಪೆನ್ನು, ಜ್ಯಾಮಿಟ್ರಿ ಬಾಕ್ಸ್ ಮುಂತಾದ ವಸ್ತುಗಳನ್ನು ವಿತರಣೆಯಾಯಿತು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬೆಳ್ಳೂಡಿ ಮಲ್ಲಿಕಾರ್ಜುನಪ್ಪ ಅವರು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸಹ ಕಾರ್ಯದರ್ಶಿ ಕೆ. ಬಸವರಾಜಪ್ಪ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಖಜಾಂಚಿ ಎಂ. ಬನ್ನಯ್ಯ ಸ್ವಾಮಿ, ನಿರ್ದೇಶಕರಾದ ಹನುಮಂತ ಶ್ರೇಷ್ಠಿ, ವೀರಭದ್ರಪ್ಪ, ಹನುಮಂತಪ್ಪ, ಬೆಳ್ಳೂಡಿ ಜ್ಯೋತಿ ಪ್ರಕಾಶ್, ಮುಖ್ಯೋಪಾಧ್ಯಾಯ ಹನುಮಂತನಾಯ್ಕ, ಅನುದಾನಿತ ಶಾಲೆಗಳ ಸಂಘದ ಉಪಾಧ್ಯಕ್ಷ ಗುಂಡಪ್ಪ, ಕಾರ್ಯದರ್ಶಿ ಹಾಲಪ್ಪ, ಖಜಾಂಚಿ ವಾಸೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಟ್ರಯ್ಯ, ಹಿರಿಯ ಪತ್ರಕರ್ತರಾದ ಬಕ್ಕೇಶ್ ನಾಗನೂರು, ಪ್ರಮುಖರಾದ ಕೆ.ಎಂ. ಪರಮೇಶ್ವರಯ್ಯ, ಕೆ.ಎಂ.ಚೆನ್ನಬಸಯ್ಯ, ಎಸ್. ಮಲ್ಲಪ್ಪ ಗುಂತಕಲ್, ಬಾಬು ಆನೆ, ನಾಗಯ್ಯ ಸ್ವಾಮಿ, ವಿಜಯಲಕ್ಷ್ಮಿ ಶರಣಯ್ಯ ಸ್ವಾಮಿ ಹಿರೇಮಠ ಮುಂತಾದವರು ಆಗಮಿಸಿದ್ದರು.
ಕೀರ್ತನ ಮತ್ತು ಸಂಗಡಿಗರಿಂದ ಪ್ರಾರ್ಥನೆ ಯಾಯಿತು. ಶಿಕ್ಷಕ ಜವಾಯಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಸೌಭಾಗ್ಯ ಹಿರೇಮಠ ಅವರು ನಿರೂಪಿಸಿದರು.