‘ವಾಸನೆ’ ಇಲ್ಲದ ಸೋಂಕು ಪತ್ತೆ

ದಾವಣಗೆರೆಯಲ್ಲಿ ಮೊದಲ ಪ್ರಕರಣ

ದಾವಣಗೆರೆ, ಜು. 2- ಏಕೋ ವಾಸನೆ ಗೊತ್ತಾಗುತ್ತಿಲ್ಲ ಎಂದು ಚಿಂತಿತನಾದ ನಗರದ ವ್ಯಕ್ತಿಯೋರ್ವ ವೈದ್ಯರ ಬಳಿ ಹೋಗಿ ಪರೀಕ್ಷೆಗೆ ಒಳಗಾದಾಗ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ.

ಈ ರೀತಿ ಕೊರೊನಾ ಕಂಡುಕೊಂಡ 24 ವರ್ಷದ ಪುರುಷ ದಾವಣಗೆರೆ  ಪಿ.ಬಿ. ರಸ್ತೆಯಲ್ಲಿರುವ ರಿಲೈಯನ್ಸ್ ಮಾರ್ಕೆ ಟ್ ಹಿಂದಿರುವ ಬಿಲಾಲ್ ಕಾಂಪೌಂಡ್‌ನ ನಿವಾಸಿಯಾಗಿದ್ದಾರೆ. ಕೊರೊನಾ ಸೋಂಕಿಗೆ ಗುರಿಯಾದ ಕೆಲವರಲ್ಲಿ ವಾಸನೆಯ ಸಾಮರ್ಥ್ಯ ಕ್ಷೀಣಿಸುತ್ತದೆ. ಇದಕ್ಕೆ ‘ಅನೋಸ್ಮಿಯ’ ಎಂಬ ಹೆಸರಿದೆ. ಕೇವಲ ಕೊರೊನಾಗೆ ಅಷ್ಟೇ ಅಲ್ಲದೇ, ಸಾಮಾನ್ಯ ಶೀತದಿಂದ ಹಿಡಿದು ಗಂಭೀರ ಸಮಸ್ಯೆಗಳ ಮುನ್ಸೂಚನೆಯಾಗಿಯೂ ಅನೋಸ್ಮಿಯ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯಕೀಯ ಪರಿಣಿತರು ತಿಳಿಸಿದ್ದಾರೆ.

error: Content is protected !!