ಕಾಶಿ ಮಠದಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ

ಹರಪನಹಳ್ಳಿ, ಜೂ.26- ರಾಷ್ಟ್ರಕ್ಕೆ ಒದಗಿರುವ ಕೋವಿಡ್-19 ತುರ್ತು ಪರಿಸ್ಥಿತಿ ಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಪರಿಹಾರ ಹಣ ದುರುಪಯೋಗ ವಾಗುತ್ತಿದೆ. ಆದರೆ, ಅಭಿನವ ಭಾರತೀಯ ಸಂಘಟಕರು ನಿಜವಾದ ನಿರ್ಗತಿಕರನ್ನು ಗುರುತಿಸಿ ಮಾನವೀಯತೆ ತೋರುತ್ತಿರುವುದು ಶ್ಲ್ಯಾಘನೀಯ ಎಂದು ಲೆಕ್ಕಪರಿಶೋಧಕ
ಜಿ.ನಂಜನಗೌಡ ಹೇಳಿದರು.

ಪಟ್ಟಣದ ಕಾಶಿ ಮಠದಲ್ಲಿ ಅಭಿನವ ಭಾರತಿ ಸಂಘಟನೆಯ ಕಾರ್ಯಕರ್ತರು ಕೊರೊನಾ ವಾರಿಯರ್ಸ್‍ಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಗಲು, ರಾತ್ರಿ ಸೇವೆ ನೀಡುತ್ತಿರುವುದು ಪ್ರಶಂಸನೀಯ. ಪೊಲೀಸ್, ಪುರಸಭೆ, ಗೃಹರಕ್ಷಕ ದಳ, ಸಮಾಜ ಕಲ್ಯಾಣ ಇಲಾಖೆಗಳ ಸಿಬ್ಬಂದಿಗಳು ನಿರಂತರ ಸೇವೆ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಈ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ, ಕ್ವಾರಂಟೈನ್‍ನ ಲ್ಲಿದ್ದವರಿಗೆ, ಬಡವರಿಗೆ, ನೀರು, ತಿಂಡಿ ಹಾಗೂ ಊಟವನ್ನು ಸುಮಾರು 40 ದಿನಗಳವರೆಗೆ ನೀಡಿರುವ ಅಭಿನವ ಸಂಘಟಕರು ಅಭಿನಂದನೆಗೆ ಅರ್ಹರು ಎಂದರು.

ಆರ್‍ಎಸ್‍ಎಸ್ ಸಂಘಟನೆಯ ಕುಮಾರಸ್ವಾಮಿ ಮಾತನಾಡಿ, ತೆರಿಗೆ ಕಟ್ಟಲು ಭಾರತೀಯರು ಹಿಂಜರಿಯುತ್ತಾರೆ. ಆದರೆ, ದಾನ ಮಾಡಲು ಒಂದು ಕೈ ಮುಂದೆ ಚಾಚುವ ಸಂಸ್ಕೃತಿ ಭಾರತೀಯರದ್ದು ಎಂದರೆ ತಪ್ಪಾಗಲಾರದು. ಕೋವಿಡ್-19 ವಿಶ್ವಾದ್ಯಂತ ಹರಡಿ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವ ಚೀನಾ, ಭಾರತದ ಮೇಲೆ ದಾಳಿ ಮಾಡಲು ಮುಂದಾಗಿದೆ. ಭಾರತೀಯರು ಚೀನಾ ಉತ್ಪನಗಳನ್ನು ತೊಲಗಿಸಬೇಕು. ದೇಶದ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರೋತ್ಸಾಹ ನೀಡಬೇಕು ಎಂದರು.

ಪರಿವರ್ತನಾ ಶಾಲೆಯ ಅಧ್ಯಕ್ಷ ರವಿ ಅಧಿಕಾರ, ಪಿಎಸ್‍ಐ ಪ್ರಕಾಶ್, ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ್, ಚಂದ್ರಶೇಖರ ಪೂಜಾರ್, ಬೆಸ್ಕಾಂ ಎಇಇ ಎಸ್.ಭೀಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಎನ್.ಜೆ.ಬಸವರಾಜ್, ಗೃಹ ರಕ್ಷಕ ದಳದ ವಾಗೀಶ್ ಪೂಜಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿಲ್ಲಾ ಪತ್ರ ಬರಹಗಾರರು, ಮಹಾವೀರ ಜೈನ್ ಸಂಘ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಸೇವಾ ಭಾರತಿ ಹಾಗೂ ಇತರೆ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಹೆಚ್.ಪಿ.ಲಿಂಗನಗೌಡ, ರವಿಕುಮಾರ್ ಎಂ.ಬಿ, ಪ್ರದೀಪ್ ಜಿ, ಕಿರಣ್, ವಿಜಯಕುಮಾರ್, ಸುಜಯಕುಮಾರ್, ರಾಹುಲ್, ಕೃಷ್ಣ, ಚಂದ್ರ, ಮಾರುತಿ, ಎಸ್. ಸುನಿಲ್, ಗಂಗಾಧರಗೌಡ, ಪರಶುರಾಮ, ರಾಮಚಂದ್ರ, ವೀರೇಶ್ ಇಟ್ಟಿಗಿ, ಯತಿರಾಜ ಮಂಚಾಲಿ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!