1,075 ಜನರ ಟೆಸ್ಟ್, ಗ್ರಾಮೀಣ ಭಾಗದಲ್ಲೂ ಟೆಸ್ಟ್ ಸಂಖ್ಯೆ ಹೆಚ್ಚಳ
ದಾವಣಗೆರೆ, ಜೂ. 23 – ರಾಜ್ಯ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆ ಯರು, ಪೊಲೀಸರೂ ಸೇರಿದಂತೆ ಕೊರೊನಾ ವಾರಿಯರ್ಗಳ ಕೊರೊನಾ ಟೆಸ್ಟ್ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಂದೇ ದಿನದ 1,075 ಜನರನ್ನು ಟೆಸ್ಟ್ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ರಾಜ್ಯ ಸರ್ಕಾರದ ಆದೇಶದಂತೆ ಈ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಸ್ಲಂ ನಿವಾಸಿಗರು, ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರು, ದುರ್ಬಲ ವರ್ಗಕ್ಕೆ ಸೇರಿದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಪರೀಕ್ಷೆಗಾಗಿ ಅಗತ್ಯ ಸೌಲಭ್ಯ ಹಾಗೂ ಲ್ಯಾಬ್ಗಳನ್ನು ಕಲ್ಪಿಸ ಲಾಗಿದೆ. ಗ್ರಾಮೀಣ ಪ್ರದೇಶದಿಂದಲೂ ಹೆಚ್ಚಿನ ಗಂಟಲು ಪರೀಕ್ಷೆ ಮಾದರಿ ಗಳನ್ನು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪರೀಕ್ಷೆ ಯಾಗುವ ನಿರೀಕ್ಷೆ ಇದೆ ಎಂದವರು ತಿಳಿಸಿದ್ದಾರೆ. ಈ ಹಿಂದೆ ಕೊರೊನಾ ರೋಗಿಗಳು 14 ದಿನಗಳಲ್ಲಿ ಗುಣವಾಗುತ್ತಿದ್ದರು. ಈಗ ವಾರದಲ್ಲೇ ಗುಣವಾಗುತ್ತಿದ್ದಾರೆ. ಶೇ.80ರಿಂದ 85ರಷ್ಟು ಸೋಂಕಿತರು ಅಸಿಂಪ್ಟ ಮೆಟಿಕ್ (ರೋಗ ಲಕ್ಷಣಗಳಿಲ್ಲದವರಾ ಗಿದ್ದಾರೆ). ಇತರೆ ರೋಗಗಳಿಂದ ಬಳಲು ತ್ತಿರುವವರೂ ಸಹ ಸಾಕಷ್ಟು ಸಂಖ್ಯೆ ಯಲ್ಲಿ ಗುಣ ಮುಖರಾಗಿದ್ದಾರೆ. ಹೀಗಾಗಿ ಕೊರೊನಾಗೆ ಹೆದರಿ ಆತಂಕ ಪಡುವ ಅಗತ್ಯ ವಿಲ್ಲ ಎಂದೂ ಜಿಲ್ಲಾಧಿಕಾರಿ ತಿಳಸಿದ್ದಾರೆ.
5122 ಬೆಡ್ ಸಿದ್ದ : ಕೊರೊನಾ ವನ್ನು ಎದುರಿಸಲು ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 5122 ಕೋವಿಡ್ ಬೆಡ್ಗಳನ್ನು ಸಿದ್ದಪಡಿಸಿಕೊಳ್ಳಲಾಗಿದ್ದು, ಯಾರೂ ಆತಂಕ್ಕೀಡಾಗುವ ಅವಶ್ಯಕತೆ ಇಲ್ಲ. ಸಾಮಾಜಿಕ ಅಂತರ, ವೈಯಕ್ತಿಕ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇಬ್ಬರಿಗೆ ಪಾಸಿಟಿವ್ : ಆವರಗೆರೆಯ 34 ವರ್ಷದ ಪುರುಷ ಹಾಗೂ ಮಹಾರಾಜಪೇಟೆಯ 68 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳ ವಾರ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಆವರಗೆರೆಯ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ ಎಂಟು ಜನರು ಹಾಗೂ ಮಹಾರಾಜ ಪೇಟೆ ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದ 12 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಹೆಚ್ಓ ಡಾ.ರಾಘವೇಂದ್ರ, ಡಿಎಸ್ಓ ಡಾ.ರಾಘವನ್ ಇದ್ದರು.