ನೇರಳೆ ಹಣ್ಣಿನಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟಬಲ್ಲ ಶಕ್ತಿ…

ಇತ್ತೀಚಿನ ಸಂಶೋಧನೆ ಪ್ರಕಾರ ನೇರಳೆ ಹಣ್ಣಿನಲ್ಲಿ ಕ್ಯಾನ್ಸರನ್ನು  ತಡೆಗಟ್ಟುವ ಅಂಶ ತುಂಬಾ ಇದೆ. ಈ ಹಣ್ಣು ಕ್ಯಾನ್ಸರ್ ಕಣಗಳನ್ನು ನಿರ್ಮೂಲನೆ ಮಾಡುವಂತಹ ಶಕ್ತಿ ಹೊಂದಿದೆ. ಹೌದು ಈ ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಬರುವುದಿಲ್ಲ, ಏಕೆಂದರೆ ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಪೊಟಾಷ್ಯಿಯಂ ಐರನ್ ಹಾಗೂ ವಿಟಮಿನ್ “ಸಿ” ತುಂಬಾ ಜಾಸ್ತಿ ಇದೆ ಹಾಗಾಗಿ ನಿಮಗೆ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತೆ ಅಂದರೆ ಇಮ್ಯುನಿಟಿ ಪವರ್ ಜಾಸ್ತಿಯಾಗುತ್ತದೆ. ಇದರಿಂದ ನಮಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ, ಅದರಲ್ಲೂ ಈ ಕ್ಯಾನ್ಸರ್ ಬರುವುದಿಲ್ಲ, ಇದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತವೆ. ನೀವು ತುಂಬಾ ಶಕ್ತಿಶಾಲಿಯಾಗುತ್ತೀರಿ. ಈ ಹಣ್ಣಿನಲ್ಲಿ  ಆಂಟಿ ಆಕ್ಸಿಡೆಂಟ್ ಇರುತ್ತೆ. ಇದರಿಂದ ಹೃದಯ ಸಂಬಂಧಿಕಾಯಿಲೆ, ರಕ್ತದ ಒತ್ತಡ ಆದಷ್ಟು ನಿಯಂತ್ರಣದಲ್ಲಿರುತ್ತದೆ.

ಮಧುಮೇಹಿಗಳಿಗಂತೂ ನೇರಳೆ ಹಣ್ಣು ರಾಮ ಬಾಣದಂತೆ ಕೆಲಸ ಮಾಡುತ್ತೆ. ಈ ಬೀಜದಿಂದ ಮಾಡಿದ ಔಷಧಿಗಳನ್ನೂ ಆದಷ್ಟು ಸೇವಿಸುತ್ತಾ ಬಂದರೆ ಶೇಕಡಾ 50 ರಷ್ಟು ಅವರಿಗೆ ಡಯಾಬಿಟೀಸ್ ಕಂಟ್ರೋಲ್ ಗೆ ಬರುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ನೇರಳೆ ಹಣ್ಣು ತುಂಬಾ ಒಳ್ಳೆಯ ಔಷಧಿ ಎಂದು ಹೇಳಬಹುದು ಮತ್ತು ಅತಿಸಾರ ಬೇಧಿ ಬಾಯಿ ಹುಣ್ಣು ಆಗಿದ್ದರು ಕಡಿಮೆಯಾಗುತ್ತದೆ. ಬಾಯಿ ದುರ್ವಾಸನೆ ಬರುತ್ತಿದ್ದರೂ ನೇರಳೆಯಿಂದ ಕಡಿಮೆಯಾಗುತ್ತದೆ.

ನೇರಳೆ ಹಣ್ಣು ಬ್ಯಾಕ್ಟೀರಿಯಾದಿಂದ ಹೋರಡಬಲ್ಲ ಶಕ್ತಿ ಹೊಂದಿರುತ್ತದೆ. ಬ್ಯಾಕ್ಟೀರಿಯಾ ವೈರಸ್ ಎಲ್ಲದರಿಂದ ಹೊರಡಬಲ್ಲ ಶಕ್ತಿ ಹೊಂದಿರುತ್ತದೆ ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ, ನೇರಳೆ ಹಣ್ಣನ್ನು ಅಗೆದು ತಿನ್ನುವುದರಿಂದ ನಮ್ಮ ಬಾಯಿ ಸಂಬಂಧಿತ ರೋಗಗಳು ಇರುವುದಿಲ್ಲ, ಈ ಹಣ್ಣಿನ ರಸ ಕುಡಿಯುವುದರಿಂದ ಕೂಡ ಬೇಧಿ ನಿಲ್ಲುತ್ತೆ ಇದನ್ನು ಮಕ್ಕಳಿಗೆ ಜೇನುತುಪ್ಪ ಹಾಕಿ ಕುಡಿಸುವುದರಿಂದ ಅವರಿಗೆ ಮೂಲವ್ಯಾಧಿ ತೊಂದರೆ ಕಡಿಮೆಯಾಗುತ್ದೆ.

ಕಣ್ಣು ಉರಿ ಇರುವವರಿಗೆ ನೇರಳೆ ಸೇವೆಸುವುದರಿಂದ ಕಡಿಮೆಯಾಗುತ್ತದೆ. ಕೆಲವರಿಗೆ ನಿದ್ದೆ ಬರುತ್ತಿಲ್ಲ ಹೇಳುತ್ತಾ ಇರುತ್ತಾರೆ ಅವರಿಗೆ ಈ ನೇರಳೆ ಜ್ಯೂಸ್ ಕುಡಿದರೆ  ನಿದ್ದೆ ಚೆನ್ನಾಗಿ ಬರುತ್ತದೆ. ಅಥವಾ ಹಣ್ಣು ಹಾಗೆ ತಿನ್ನುವುದರಿಂದ ಕೂಡ ನಿದ್ದೆ ಚೆನ್ನಾಗಿ ಬರುತ್ತೆ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇಷ್ಟೊಂದೆಲ್ಲಾ ಗುಣ ಇರುವ ಈ ಹಣ್ಣಿನಲ್ಲಿ ಕ್ಯಾನ್ಸರ್ ನ ಗುಣ ಮಾಡುವ ಶಕ್ತಿ ಇದೆ. ಇದನ್ನು ನಿಯಮಿತವಾಗಿ ತಿನ್ನಿ ಕ್ಯಾನ್ಸರ್‌ನಿಂದ ದೂರ ಇರಿ.


ಅಲೋಕ್
ದಾವಣಗೆರೆ.

error: Content is protected !!