ಮಹಿಳೆಯರು ಮುಂಚೂಣಿಗೆ ಬಂದರೆ ದೇಶದ ಉದ್ಧಾರ

ಹಿರಿಯ ವಕೀಲ ಎಲ್‌.ಎಚ್‌. ಅರುಣ ಕುಮಾರ್‌ ಅಭಿಮತ

ದಾವಣಗೆರೆ, ಆ.26 – ಈ ಸಮಾಜ, ಈಗಿನ ರಾಜಕಾರಣ ಸುಧಾರಣೆಯಾಗಬೇಕಿ ದ್ದರೆ, ದೇಶದ ಅಭಿವೃದ್ಧಿ ಆಗಬೇಕಿದ್ದರೆ ಮಹಿಳೆಯರು ಮುಂಚೂಣಿಗೆ ಬಂದರೆ ಮಾತ್ರ ಸಾಧ್ಯ ಎಂದು ಹಿರಿಯ ವಕೀಲ ಎಲ್‌.ಎಚ್‌. ಅರುಣ ಕುಮಾರ್‌ ಪ್ರತಿಪಾದಿಸಿದರು.

ಮುಸ್ಲಿಂ ಮಹಿಳೆಯರೇ ನಡೆಸುವ ‘ಮೆಹನತ್‌’ ಸಹಕಾರ ಬ್ಯಾಂಕ್‌ನ ನೂತನ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಪ್ರತಿಭೆಗಳನ್ನು ತೋರಿಸಿದ್ದಾರೆ. ಕೆಲವು ಕಡೆ ಪುರುಷರಿಗಿಂತ ಹೆಚ್ಚು ಪ್ರತಿಭಾವಂತರಿದ್ದಾರೆ ಎಂದು ಹೇಳಿದರೆ ತಪ್ಪೇನಿಲ್ಲ. ಆದರೆ ಸಾಮಾ ಜಿಕ, ರಾಜಕೀಯವಾಗಿ ಅವಕಾಶಗಳು ಸಿಗದೇ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ದಾವಣಗೆರೆಯಲ್ಲಿ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತ ರಾಗುತ್ತಿರುವುದು ಸಂತೋಷದ ವಿಚಾರ. ಪುರುಷರು ಯಾಕೋ ಹಿಂದೆ ಬೀಳುತ್ತಿದ್ದಾರೆ ಎಂದು ಅವರು ಹೇಳಿದರು.

ಹಿರಿಯ ವಕೀಲ ಅನೀಸ್‌ ಪಾಷ ಮಾತನಾಡಿ,  ಸಾರ್ವಜನಿಕವಾದ ಎಲ್ಲ ಸಂಸ್ಥೆಗಳನ್ನು ಮಾರಾಟ ಮಾಡುವವರು ಅಧಿಕಾರದಲ್ಲಿದ್ದಾರೆ. ಕಾರು ತೆಗೆದುಕೊಳ್ಳುವಾಗಲೇ ರೋಡ್‌ಟ್ಯಾಕ್ಸ್‌ ಕಟ್ಟಿದ್ದರೂ ಮತ್ತೆ ಟೋಲ್‌ ಕಟ್ಟಿಸಿಕೊಳ್ಳುತ್ತಿದ್ದಾರೆ. ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಇದೆ. ಮಾರಾಟ ವನ್ನು ವಿರೋಧಿಸಿ ಶೀಘ್ರದಲ್ಲಿ ಪಿಟಿಷನ್‌ ಹಾಕಲಾಗುವುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ರಾದ ಜಬೀನಾ ಖಾನಂ ಮಾತನಾಡಿ, ‘ಬೀಡಿ ಕಟ್ಟುವ ಮಹಿಳೆಯರಿಗಾಗಿ ಇರುವ ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ಬೀಡಿ ಕಟ್ಟದ ಮಹಿಳೆಯರಿಗಾಗಿ ಮುಸ್ಲಿಂ ಮಹಿಳಾ ಒಕ್ಕೂಟ, ಈ ಎಲ್ಲ ಮಹಿಳೆಯರಿಗೆ ‘ಮೆಹನತ್‌’ ಬ್ಯಾಂಕ್‌ ಇದೆ. ಅವೆಲ್ಲ ಬೇರೆ ಬೇರೆ ಕಡೆ ಕಾರ್ಯ ನಿರ್ವಹಿಸುತ್ತಿದ್ದವು. ಇನ್ನು ಮುಂದೆ ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿವೆ’ ಎಂದು ತಿಳಿಸಿದರು.

ಯೂನಿಯನ್‌ ಕಾರ್ಯದರ್ಶಿ ಕರಿಬಸಪ್ಪ ಸ್ವಾಗತಿಸಿದರು. ಬಾಲಕೃಷ್ಣ, ನಾಜೀಮಾ ಬಾನು, ಹಸೀನಾ ಬಾನು ಉಪಸ್ಥಿತರಿದ್ದರು.

error: Content is protected !!