ಅನ್ನ ನೀಡುವ ರೈತನ ಬಾಳು ಉಜ್ವಲವಾಗಲಿ

ರಂಭಾಪುರಿ ಶ್ರೀ

ರಂಭಾಪುರಿ ಪೀಠ (ಬಾಳೆಹೊನ್ನೂರು), ಮಾ.28- ಮನುಷ್ಯ ಬದುಕಿ ಬಾಳಲು ಅನ್ನ ಬೇಕು. ಹಣವಿಲ್ಲದೇ ಬದುಕಬಹುದು. ಆದರೆ ಅನ್ನ, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತನ ಬಾಳು ಉಜ್ವಲಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ `ರೈತ ಮತ್ತು ಕೃಷಿ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ರೈತನ ಪರಿಸ್ಥಿತಿ ಸಂಕಷ್ಟಕ್ಕೊಳಗಾಗಿದೆ. ಸಾಂಪ್ರದಾಯಿಕ ಕೃಷಿಯಿಂದ ರೈತರ ಬದುಕು ಉಜ್ವಲಗೊಳ್ಳುವುದು ಕಷ್ಟವಾಗಿದೆ. ಸುಧಾರಿತ ಕೃಷಿ ಅಳವಡಿಸಿಕೊಳ್ಳುವ ಅಗತ್ಯ ಬಹಳಷ್ಟಿದೆ ಎಂದರು.

ಉತ್ತಮ ಬೀಜ, ಸಾವಯವ ಗೊಬ್ಬರ ಬಳಕೆ, ನೀರಿನ ಸೌಕರ್ಯ, ಆಧುನಿಕ ಬೇಸಾಯದಿಂದ ರೈತ ಬೆಳೆಯಲು ಸಾಧ್ಯವಾಗುತ್ತದೆ. ಪೃಥ್ವಿ ತತ್ವದ ಅಧಿನಾಯಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕಾಯಕವೇ ಕಳಾ ಚೈತನ್ಯವೆಂದು ಸಾರಿ, ಹಸಿರು ಧ್ವಜ ಎತ್ತಿ ಹಿಡಿದು ಸರ್ವರ ಬಾಳು ಶಾಂತಿ, ಸಮೃದ್ಧಿ ಯಿಂದ ಅಭಿವೃದ್ಧಿ ಹೊಂದಬೇ ಕೆಂದು ಹಾರೈಸಿದ್ದಾರೆ ಎಂದರು.

‘ಸಾಧನೆಯ ಸತ್ಪಥ ಭಾಗ-2’ ಕೃತಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮಾತನಾಡಿ, ಶ್ರೀ ರಂಭಾಪುರಿ ಪೀಠ ಯಾವಾಗಲೂ ಧರ್ಮ, ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಾ ಬಂದಿದೆ. ಅಸಿ, ಮಸಿ, ಕೃಷಿ ನಾಡಿನ ಸಂರಕ್ಷಣೆಗೆ ಬೇಕೇಬೇಕು. ದೇಶ ಕಾಯುವ ಸೈನಿಕ, ಉತ್ತಮ ಸಾಹಿತ್ಯ ಸಂರಕ್ಷಣೆ ಮತ್ತು ಕೃಷಿ ಇವುಗಳತ್ತ ಎಲ್ಲರ ಒಲವು, ಸಹಕಾರ ಬೇಕಾಗುತ್ತದೆ. ಸಾಧನೆಯ ಸತ್ಪಥ ಕೃತಿ ಶ್ರೀ ರಂಭಾಪುರಿ ಜಗದ್ಗುರುಗಳವರ ಆದರ್ಶ ಚಿಂತನೆಗ ಳನ್ನು ಒಳಗೊಂಡು ಮೌಲ್ಯಾಧಾರಿತ ಬದುಕಿಗೆ ಈ ಕೃತಿ ಸಾಕ್ಷಿಯಾಗಿದೆ ಎಂದರು.  ವಿ.ಪ. ಸದಸ್ಯ ಎಸ್.ಎಲ್. ಭೋಜೇಗೌಡರು ಮಾತನಾಡಿದರು. 

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ, ಅ.ಭಾ.ವೀ. ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ್, ಬೆಂಗಳೂರಿನ ಮಂಜುನಾಥ ಆರಾಧ್ಯ, ಚಿಕ್ಕಮಗಳೂರು ವೀರಶೈವ ಸಮಾ ಜದ ಕಾರ್ಯ ದರ್ಶಿ ಜಗದೀಶ್ ನುಡಿ ನಮನ ಸಲ್ಲಿಸಿದರು.

ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ ‘ನೈಸರ್ಗಿಕ ಕೃಷಿ’ ಕುರಿತು ಉಪನ್ಯಾಸ ನೀಡಿದರು. ನೆಗಳೂರಿನ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ರೈತರ ಸಮಕಾಲೀನ ಸಮಸ್ಯೆ ಪರಿಹಾರ ಕುರಿತು ಮಾತನಾಡಿದರು. ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ, ಕೃಷಿ ಕ್ಷೇತ್ರದ ಹರವು ವಿಸ್ತಾರಗಳ ಕುರಿತು ಮಾಹಿತಿ ನೀಡಿದರು. ನೀಲಗಲ್ಲ ಹಿರೇಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯರು, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯರು, ಲೋಕೋಪ ಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೆ.ಎಸ್. ಕೃಷ್ಣಾರೆಡ್ಡಿ, ಬೆಂಗಳೂರಿನ ಶ್ರೀನಿವಾಸ ರೆಡ್ಡಿ,  ಶಿವಮೊಗ್ಗದ ಹನಸವಾಡಿ ಕೇಶವಮೂರ್ತಿ, ಗ್ರಂಥ ದಾನಿ ಎಂ.ಕೊಟ್ರೇಶಪ್ಪ ಹರಪನಹಳ್ಳಿ  ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. 

ಗ್ರಾ.ಪಂ.ಸದಸ್ಯ ಬಿ. ಜಗದೀಶ್ಚಂದ್ರ ಸ್ವಾಗತಿಸಿದರು. ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

error: Content is protected !!