ಅಂತರರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ

ದಾವಣಗೆರೆ, ಮಾ. 24- ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ವತಿಯಿಂದ 15 ವರ್ಷದ ಒಳಗಿನ ಯುವಜನತೆಗೆ ಕೋವಿಡ್ 19 ಕುರಿತ ತಮ್ಮ ಅನುಭವವನ್ನು ತಮ್ಮ ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ವಿಷಯವಾಗಿ ಮಾ.28 ರಂದು ಅಂತರರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಪತ್ರ ಲೇಖನ ಸ್ಪರ್ಧೆಯು ಒಂದು ಗಂಟೆಯ ಅವಧಿಯದಾಗಿದ್ದು, ನೂರು ಅಂಕಗಳನ್ನು ಒಳಗೊಂಡಿದೆ. 800 ಪದಗಳನ್ನು ಮೀರದಂತೆ ಪತ್ರ ಬರೆಯಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಮೂರು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಸಂಖ್ಯೆ: 9986038721 ನ್ನು ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

error: Content is protected !!