ದಾವಣಗೆರೆ, ಜು.31- ಬಾಡಾ ಕ್ರಾಸ್ ಬಳಿಯ ಬೇಕರಿ ಎದುರು ಪಾದಚಾರಿ ರಸ್ತೆ ದಾಟುವಾಗ ರಾತ್ರಿ 8 ಗಂಟೆ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತನ ವಿವರಗಳು ತಿಳಿಯದ ಕಾರಣ ಆತನನ್ನು ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ಸುಮಾರು 35 ವರ್ಷ ವಯಸ್ಸಿನ ಈತ, ಸಾಧಾರಣ ಮೈಕಟ್ಟು, ಗೋದಿ ಮೈ ಬಣ್ಣ, ದುಂಡುಮುಖ ಹೊಂದಿರುತ್ತಾರೆ. ಮೃತನು ನೀಲಿ ಬಣ್ಣದ ತುಂಬು ತೋಳಿನ ಷರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಗೆರೆಗಳುಳ್ಳ ಮಾಸ್ಕ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಸಂಚಾರ ಪೊಲೀಸ್ ವೃತ್ತದ ದೂರವಾಣಿ ಮೊ. 77600 97292 ಅಥವಾ 94808 03253ಕ್ಕೆ ಸಂಪರ್ಕಿಸಬಹುದು.
December 28, 2024