ದಾವಣಗೆರೆ, ಮಾ.5 – ಪಕ್ಷಕ್ಕೆ ಸಂಘಟನೆಯು ಅತೀ ಮುಖ್ಯವಾಗಿರುತ್ತದೆ. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕು. ಆತ್ಮ ನಿರ್ಭರದಲ್ಲಿ ಮಹಿಳೆಯರು ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಹೇಶ್ ಕಾರ್ಯಕರ್ತರಿಗೆ ತಿಳಿಸಿದರು.
ಅವರು ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯ ನೇತೃತ್ವ ವಹಿಸಿ ಮತನಾಡಿದರು.
ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ಜಿಲ್ಲೆಯ ಪ್ರಭಾರಿ ಶ್ರೀಮತಿ ಶರಣಮ್ಮ ಕಾಮರೆಡ್ಡಿ ಮಾತನಾಡಿದರು.
ಸಭೆಯಲ್ಲಿ ಸಹ ಪ್ರಭಾರಿ ಶ್ರೀಮತಿ ರೇಣುಕಾ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಬಿ.ಎಸ್. ಜಗದೀಶ್, ಶಾಂತರಾಜ್ ಪಾಟೀಲ್, ಸೊಕ್ಕೆ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪವಾಲಿ, ಸವಿತಾ ರವಿಕುಮಾರ್,
ಜಿಲ್ಲಾ ಪಧಾದಿಕಾರಿಗಳು, ಎಲ್ಲಾ ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದ ರ್ಶಿಗಳು, ಬಿಜೆಪಿಯ ಮುಖಂಡರುಗಳು ಉಪಸ್ಥಿತರಿದ್ದರು.