ಹರಿಹರ, ಮಾ.1 ಕೊಟ್ಟೂರಿನಲ್ಲಿ ಇದೇ ದಿನಾಂಕ 7 ರಂದು ನಡೆಯಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಬದಲಾಗಿ ಈ ಬಾರಿ ನಗರದಲ್ಲಿ ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ವೀರಯ್ಯ ಗಜಾಪುರ ತಿಳಿಸಿದ್ದಾರೆ.
ಹರಿಹರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸರ್ಕಾರದ ಆದೇಶದ ಹಿನ್ನೆಲೆ ಯಲ್ಲಿ ಮಾ. 4 ರ ಪಾದಯಾತ್ರೆ ರದ್ದುಗೊಳಿಸಿದ್ದು, ಬದಲಾಗಿ ನಗರದ ಜೀಜಾಮಾತಾ ಕಾಲೋನಿಯ ಲ್ಲಿನ ಕೊಟ್ಟೂರೇ ಶ್ವರ ದೇವಸ್ಥಾನದಲ್ಲಿ ರುದ್ರಾಭಿ ಷೇಕ ಮತ್ತು ಧರ್ಮಸಭೆ ಏರ್ಪಡಿಸಲಾಗಿದೆ ಎಂದರು.
ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು, ನೀಲಗುಂದ ಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ದೇವಸ್ಥಾನ ರಸ್ತೆಯ ರೇಣುಕಾ ಮಂದಿರ ದಿಂದ ಕೊಟ್ಟೂರೇಶ್ವರ ದೇವಸ್ಥಾನದವರೆಗೆ ಪಾದ ಯಾತ್ರೆ ಇರುತ್ತದೆ ಎಂದರು. ಸೋಮಶೇಖರಯ್ಯ, ಮಂಜುನಾಥ್, ನಾಗರಾಜ್ ಇಂಜಿನಿಯರ್, ಕರಿಬಸಪ್ಪ ನಂದ್ಯಾಲ, ದಯಾನಂದ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.