ದಾವಣಗೆರೆ, ಫೆ.27 – ಇಲ್ಲಿಗೆ ಸಮೀಪದ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇದೇ ದಿನಾಂಕ 26 ರ ಭರತ ಹುಣ್ಣಿಮೆಯಿಂದ ವಿವಿಧ ವಾಹನಾದಿ ಉತ್ಸವದೊಂದಿಗೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಹಾ ರಥೋತ್ಸವ ಜರುಗಲಿದೆ.
ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವವು ನಡೆಯಲಿದ್ದು, ರಥೋತ್ಸವದ ಪ್ರಯುಕ್ತ ನಾಳೆ ದಿನಾಂಕ 28ರ ಭಾನುವಾರ ಸರ್ಪಾರೋಹಣ ಉತ್ಸವ, ಮಾರ್ಚ್ 1 ರಂದು ರಾತ್ರಿ 8 ಕ್ಕೆ ರಥಕ್ಕೆ ಕಳಸಾರೋಹಣ ಮತ್ತು ಅಶ್ವಾರೋಹಣ ಉತ್ಸವ, ಮಾರ್ಚ್ 2 ರಂದು ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಆಗಮನವಾಗಲಿದೆ.
ಮಾರ್ಚ್ 3 ರಂದು ಬೆಳಿಗ್ಗೆ 8 ಕ್ಕೆ ಗಜಾರೋಹಣ ಉತ್ಸವ ನಡೆಯ ಲಿದ್ದು, ಅಂದು ಸಂಜೆ 6 ಕ್ಕೆ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದ್ದಾರೆ.