ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ದಾವಣಗೆರೆ, ಫೆ.27 – ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿ ಗೌರಿಯು (ಹೆಸರು ಬದಲಾಯಿಸಲಾಗಿದೆ)   ತೀವ್ರ ನಂಜಿನಿಂದ ಪೋಸ್ಟ್ ಪಾರ್ಟಮ್ ನಿಂದ (ಹೆರಿಗೆ ಸಂದರ್ಭದಲ್ಲಿ ಶರೀರದಲ್ಲಾಗುವ ವಿಪರೀತ ಬದಲಾವಣೆ) ತೀವ್ರ ಮೂತ್ರಪಿಂಡ ವೈಫಲ್ಯ, ಪಾಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ  ಪ್ರಾಣಾಪಾಯಕ್ಕೆ ಸಿಲುಕಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಮೂತ್ರಪಿಂಡ ತಜ್ಞರಾದ ಡಾ|| ಆರ್. ಮೋಹನ್ ಅವರು ಪ್ಲಾಸ್ಮಾ ಫೆರೋಸಿಸ್ ಎಂಬ ವಿಶೇಷ ಚಿಕಿತ್ಸೆ ನೀಡಿ ಆಕೆಯ ಜೀವ ಉಳಿಸಿದ್ದಾರೆ.

ಪ್ಲಾಸ್ಮಫೇರೋಸಿಸ್ ಎನ್ನುವ ಡಯಾಲಿಸಿಸ್ ಚಿಕಿತ್ಸೆಯು  ದೊಡ್ಡ ದೊಡ್ಡ ನಗರಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು ಇದೀಗ ಡಾ. ಆರ್. ಮೋಹನ್ ಅವರು ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಇಂತಹ ಉತ್ತಮ ಚಿಕಿತ್ಸೆಯನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ದಾವಣಗೆರೆ ಹಾಗೂ ಸುತ್ತ-ಮುತ್ತಲಿನ 5-6 ಜಿಲ್ಲೆಗಳ ಮೂತ್ರಪಿಂಡ ರೋಗಿಗಳಿಗೆ ಅನುಕೂಲವಾಗಲಿದೆ. ಡಾ. ಅಗರವಾಲ್, ಡಾ. ಜಗದೀಶ್ವರಿ ಹಾಗೂ  ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ವಿಜಯಲಕ್ಷ್ಮಿ ಮಲ್ಯ, ಡಾ. ಸಹನಾ  ಅವರ ಸಹಕಾರದಿಂದ ಈ ಚಿಕಿತ್ಸೆಯು ಯಶಸ್ವಿಯಾಗಿದೆ ಎಂದು ಡಾ. ಆರ್. ಮೋಹನ್ ತಿಳಿಸಿದ್ದಾರೆ.

ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸ್ಥೆಯ ಜಂಟಿ ಕಾರ್ಯದರ್ಶಿಯೂ ಆಗಿರುವ ಮಾಜಿ ಸಚಿವ  ಶಾಮನೂರು ಮಲ್ಲಿಕಾರ್ಜುನ್ ಅವರುಗಳ ದೂರದೃಷ್ಟಿಯಿಂದ ಈ ಚಿಕಿತ್ಸೆಯು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಅವರು ವಿವರಿಸಿದ್ದಾರೆ.

error: Content is protected !!