ಸೇಲಂ ಓಪನ್ ಕರಾಟೆ ಚಾಂಪಿಯನ್‌ ಶಿಪ್ : ನಿಧಿ ಬೇತೂರ್ ತೃತೀಯ

ದಾವಣಗೆರೆ, ಫೆ.28- ಸೇಲಂ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್,  ಶಿಶೋಕೈ ಕರಾಟೆ ಅಕಾಡೆಮಿ ವತಿಯಿಂದ  ತಮಿಳುನಾಡಿನ ಸೇಲಂನಲ್ಲಿ ಇತ್ತೀಚೆಗೆ ಆಯೋಜಿಸಿದ್ದ  ರಾಷ್ಟ್ರಮಟ್ಟದ   ಸೇಲಂ ಓಪನ್  ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ನಗರದ ನಿಧಿ ಬೇತೂರು  13 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಿ   ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾಳೆ.

ಕೆ.ಪಿ.ಜೋಸ್ ಅವರಿಂದ ತರಬೇತಿ ಪಡೆದಿರುವ  ನಿಧಿ, ನಗರದ ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿ ಪುತ್ರಿ.

error: Content is protected !!