ಅಂಬೇಡ್ಕರ್ ಆದರ್ಶಗಳನ್ನು ಪಾಲಿಸಲು ಕರೆ

ಜಗಳೂರಿನ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ

ಜಗಳೂರು, ಫೆ.23 – ಯುವಜನರು ಮತ್ತು ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಯುವಕರು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶಾಂತಕುಮಾರಿ ಶಶಿಧರ್ ತಿಳಿಸಿದರು.

ಜಗಳೂರು ತಾಲ್ಲೂಕು ಕೆಚ್ಚೇನಹಳ್ಳಿ ಗ್ರಾಮದಲ್ಲಿ ಮಹಾನಾಯಕ ಡಾ.ಬಾಬಾಸಾಹೇಬ್‍ ಅಂಬೇಡ್ಕರ್ ಅವರ  ಫ್ಲೆಕ್ಸ್ ಅನಾವರಣ ಮಾಡಿ ಅವರು ಮಾತನಾಡಿದರು.

ಡಾ.ಬಾಬಾಸಾಹೇಬ್‍ ಅಂಬೇಡ್ಕರ್‌ ಅವರು ಕೇವಲ ದಲಿತ ಸೂರ್ಯ ಅಲ್ಲಾ ಅವರೊಬ್ಬ ವಿಶ್ವ ನಾಯಕ. ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬೇಡಿ. ಅವರನ್ನ ಇಂದು ಇಡೀ ವಿಶ್ವವೇ ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ ನೋಡುತ್ತಿರುವುದು ದುರಂತ. ನನ್ನಂತಹ ಮಹಿಳೆ ಇಂದು ಈ ವೇದಿಕೆಯ ಮೇಲೆ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಸಾಕ್ಷಿ ಅಂಬೇಡ್ಕರ್ ಎಂದು ನಾನು ಹೆಮ್ಮೆಯಿಂದ ಹೇಳುವೆ ಎಂದರು.

ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ, ಇಂದು ಬದಲಾದ ಸಮಾಜದ ವ್ಯವಸ್ಥೆಯಲ್ಲಿ ಇಂದಿಗೂ ಮೇಲು ಕೀಳು ಎಂದು ತಾರತಮ್ಯ ಮಾಡುತ್ತಿರುವುದು ದುರಂತ. ಮಹಾನಾಯಕ ಧಾರಾವಾಹಿ ಪ್ರಸಾರವಾಗುತ್ತಿರುವುದನ್ನು ಸಹಿಸದ ಕೆಲವು ಕಿಡಿಗೇಡಿಗಳು ಆ ಧಾರವಾಹಿಯನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್ ನಾಯ್ಕ್, ಗ್ರಾಮ ಪಂಚಾಯಿತಿ ಭೀಮ್ ಆರ್ಮಿಯಾ ಜೀವನ್, ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ನರೇಶ್, ಸದಸ್ಯರಾದ ಒ. ಮಂಜಣ್ಣ, ಹರೀಶ್ ಕೆಚ್ಚೇನಹಳ್ಳಿ, ರಾಕೇಶ್, ಎಸ್.ಎಫ್‍.ಐ ಮುಖಂಡ  ಮಹಾಲಿಂಗಪ್ಪ ಮತ್ತಿತರರು ಹಾಜರಿದ್ದರು.

error: Content is protected !!