‘ಪೊಗರು’ – ಅರ್ಚಕರ ಅವಹೇಳನ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಖಂಡನೆ

ದಾವಣಗೆರೆ, ಫೆ.21 – ಪೊಗರು ಕನ್ನಡ ಚಲನಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದಂತಾಗುತ್ತದೆ ಎಂದಿರುವ ಸಚ್ಚಿದಾನಂದ ಮೂರ್ತಿ, ತಕ್ಷಣವೇ ಈ ದೃಶ್ಯವನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. 

ಇಡೀ ರಾಜ್ಯದಾದ್ಯಂತ ಇರುವ ಅರ್ಚಕರು ಹಾಗೂ ಪುರೋಹಿತರು ತೀವ್ರ ಬೇಸರಗೊಂಡಿದ್ದು ಸನಾತನ ಧರ್ಮದ ರಕ್ಷಕರಾದ ಇವರುಗಳನ್ನು ಅವಹೇಳನಕಾರಿಯಾಗಿ ಅವಮಾನಕಾರಿಯಾಗಿ ಚಿತ್ರಿಸಿರುವುದು ಸರಿಯಲ್ಲ. ಈ ಕೂಡಲೇ ಆ ದೃಶ್ಯವನ್ನು ತೆಗೆದು ಹಾಕಬೇಕು ಹಾಗೂ ಚಿತ್ರ ನಿರ್ಮಾಪಕರು ನಿರ್ದೇಶಕರು ಕ್ಷಮೆ ಕೋರಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ

error: Content is protected !!