ದಾವಣಗೆರೆ, ಫೆ.16- ನಗರ ಪಾಲಿಕೆಯ ಮಳಿಗೆಗಳ ಬಾಡಿಗೆ ವಸೂಲಾತಿ ಕಾರ್ಯಕ್ರಮ ಮುಂದುವರೆದಿದ್ದು, ಮಂಗಳವಾರ ಬಾರ್‍ಲೈನ್ ರಸ್ತೆಯಲ್ಲಿನ 30 ಮಾಂಸದ ಅಂಗಡಿಗಳಿಗೆ ಬೀಗ ಹಾಕಲಾಯಿತು. ಈ ಮಳಿಗೆಗಳಿಂದ 10.89 ಲಕ್ಷ ರೂ. ಬಾಕಿ ಬರಬೇಕಿತ್ತು. ಹೀಗಾಗಿ, ಪಾಲಿಕೆ ಸಿಬ್ಬಂದಿಗಳು ಅಲ್ಲಿಗೆ ತೆರಳಿ ಬೀಗ ಹಾಕಿದ್ದಾರೆ.
38 ಲಕ್ಷ ವಸೂಲಾತಿ : ಕಳೆದ ಮೂರು ದಿನಗಳಿಂದ ಪಾಲಿಕೆಯ ಮಳಿಗೆಗಳ ಬಾಡಿಗೆ ವಸೂಲಾತಿ ಮಾಡಲಾ ಗುತ್ತಿದ್ದು, ಸುಮಾರು 38 ಲಕ್ಷ ರೂ. ವಸೂಲಾಗಿದೆ ಎಂದು ಪಾಲಿಕೆ ಕಂದಾಯ ವಿಭಾಗದ ಪಿ. ವೆಂಕಟೇಶ್ ತಿಳಿಸಿದ್ದಾರೆ.