19, 20 ರಂದು ಶ್ರೀ ಜಿಹ್ವೇಶ್ವರ ಸಭಾಭವನ ಉದ್ಘಾಟನೆ

ರಾಣೇಬೆನ್ನೂರು, ಏ.16-  ಸ್ಥಳೀಯ ಸ್ವಕುಳಸಾಳಿ ಸಮಾಜ ವತಿಯಿಂದ ನಗರದ ಮಾಸೂರು-ಮುಂಡರಗಿ ರಸ್ತೆಯಲ್ಲಿರುವ ತುಳಜಾ ಭವಾನಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಜಿಹ್ವೇಶ್ವರ ಸಭಾಭವನದ ಉದ್ಘಾಟನಾ ಸಮಾರಂಭ, ಶ್ರೀ ತುಳಜಾ ಭವಾನಿ ಜಯಂತ್ಯೋತ್ಸವ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಏ.19 ಹಾಗೂ 20 ರಂದು ಹಮ್ಮಿಕೊಳ್ಳಲಾಗಿದೆ.

ಏ.19 ರಂದು ಬೆಳಗ್ಗೆ 6 ಕ್ಕೆ ವಾಸ್ತುಶಾಂತಿ ಹೋಮ ನಂತರ ಶ್ರೀ ಗುರು ದತ್ತಾತ್ರೇಯ ಮತ್ತು ಶ್ರೀ ಹನುಮಂತ ದೇವರ ಪ್ರತಿಷ್ಟಾಂಗ ಹೋಮ ಕಾರ್ಯಕ್ರಮ ಜರುಗಲಿದೆ. 

ಏ.20 ರಂದು ಬೆಳಗ್ಗೆ 6 ಕ್ಕೆ ವಾಸ್ತು ಶಾಂತಿ ಪೂರ್ಣಾಹುತಿ, ಶ್ರೀ ಗುರು ದತ್ತಾತ್ರೇಯ ಹಾಗೂ ಶ್ರೀ ಹನುಮಂತ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯು ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಲಿದೆ. ನಂತರ ಚಂಡಿ ಹೋಮ ನಡೆಯಲಿದೆ. ಮಧ್ಯಾಹ್ನ 1 ಕ್ಕೆ ಶ್ರೀ ಜಿಹ್ವೇಶ್ವರ ಸಭಾಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದ ಮಹಾರಾಜರು ಉದ್ಘಾಟಿಸುವರು. ಸ್ವಕುಳಸಾಳಿ ಸಮಾಜದ ತಾಲ್ಲೂಕು ಅಧ್ಯಕ್ಷ ಖಂಡಪ್ಪ ರೋಖಡೆ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತೀಯ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ ಎ. ಚಿಲ್ಲಾಳ, ರಾಜ್ಯಾಧ್ಯಕ್ಷ ಚಂದ್ರಕಾಂತ ಎನ್. ಭಂಡಾರೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. 

error: Content is protected !!