ರಾಣೇಬೆನ್ನೂರಿನ ಶಿಕ್ಷಕರ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ
ರಾಣೇಬೆನ್ನೂರು, ಫೆ.13- ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ, ಅವಮಾನ, ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಗಳಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಅಭಿಪ್ರಾಯಪಟ್ಟರು.
ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕಗಳು, ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಸಂಪನ್ಮೂಲ ಕೇಂದ್ರ ಸಂಯುಕ್ತವಾಗಿ ನಡೆಸಿದ ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ, ಸಾವಿತ್ರಿಬಾಯಿ ಫುಲೆ ಜನ್ಮದಿನ ಹಾಗೂ ಶೈಕ್ಷಣಿಕ ಕಾರ್ಯಾಗಾರದ ಉದ್ಘಾ ಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಗಳು ಅನಿವಾರ್ಯ, ಅವು ನಿಮಿತ್ತ ಮಾತ್ರ ವಾಗಿರಬೇಕು. ಚುನಾವಣೆ ಮುಗಿಯುತ್ತಲೇ ದ್ವೇಷ ಮರೆತು ಸಂಸ್ಥೆಯ ಬೆಳವಣಿಗೆಯ ಚಿಂ ತನೆ ಮಾಡುವಂತೆ ಭಾನುವಳ್ಳಿ ಕರೆ ನೀಡಿದರು.
ಸಚಿವ ಆರ್. ಶಂಕರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಶಾಸಕ ಅರುಣಕುಮಾರ ಪೂಜಾರ ಅಧ್ಯಕ್ಷತೆ ವಹಿಸಿ ಎಲ್ಲರಿಗೂ ಅಕ್ಷರ ಕಲಿಸಿ ಪ್ರತಿಯೊಬ್ಬರ ಪ್ರತಿಭೆಗೆ ಮೆರಗು ತರುವ ಕೆಲಸವನ್ನು ಪ್ರಾಥಮಿಕ ಶಿಕ್ಷಕರು ಮಾಡುತ್ತಾರೆ. ಅವರಿಗೆ ಸಮಾಜ ಎಂದೆಂದು ಗೌರವ ಸಲ್ಲಿಸುತ್ತಲೇ ಇದೆ. ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಅಂದು ಆದ್ಯತೆ ನೀಡಿದ್ದರಿಂದ ಇಂದು ನಾವು ಶಿಕ್ಷಣ ಪಡೆಯುವಂತಾಯಿತು ಎಂದು ಕರೂರ ಕ್ಷೇತ್ರದ ಜಿ.ಪಂ. ಸದಸ್ಯ ಮಂಗಳಗೌರಿ ಪೂಜಾರ ಹೇಳಿದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷರಾದ ಗೀತಾ ಲಮಾಣಿ, ನಗರಸಭೆ ಉಪಾಧ್ಯಕ್ಷ ಕಸ್ತೂರಿ ಚಿಕ್ಕಬಿದರಿ, ಜಿ.ಪಂ. ಸದಸ್ಯರು, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ, ನಿಕಟಪೂರ್ವ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಹಾಲಿ ಶಿಕ್ಷಣಾಧಿಕಾರಿ ಎನ್.ಜೆ. ಗುರುಪ್ರಸಾದ್, ಕಸಾಪ ಅಧ್ಯಕ್ಷೆ ರತ್ನಮ್ಮ, ಸಂಘಟನಾ ಅಧ್ಯಕ್ಷ ಎಸ್.ಎಚ್. ಮೇಟಿ ಮತ್ತಿತರರಿದ್ದರು.