ಚಳ್ಳಕೆರೆ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಚಳ್ಳಕೆರೆ, ಫೆ.13- ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ.

ಬೆಳಗೆರೆ ಗ್ರಾ.ಪಂ. ಅಧ್ಯಕ್ಷರಾಗಿ ಜೆ. ರವಿಕುಮಾರ್, ಉಪಾಧ್ಯಕ್ಷರಾಗಿ ಕೆ. ರೂಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಣಿಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ರಂಜಿತಾ, ಉಪಾಧ್ಯಕ್ಷರಾಗಿ ಕರಿಯಮ್ಮ ಆಯ್ಕೆಯಾಗಿದ್ದಾರೆ. 

ಪಿ. ಮಹದೇವಪುರ ಗ್ರಾ.ಪಂ. ಅಧ್ಯಕ್ಷರಾಗಿ ಬಿ.ಎಲ್. ರಾಜೇಶ್, ಉಪಾಧ್ಯಕ್ಷರಾಗಿ ರತ್ನಮ್ಮ, ಚೌಳೂರು ಗ್ರಾ.ಪಂ. ಅಧ್ಯಕ್ಷರಾಗಿ ಗಂಗಮ್ಮ, ಉಪಾಧ್ಯಕ್ಷರಾಗಿ ಇ. ತಿಪ್ಪಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಾಜೂರು ಗ್ರಾ.ಪಂ. ಅಧ್ಯಕ್ಷರಾಗಿ ವರಲಕ್ಷ್ಮೀ, ಉಪಾಧ್ಯಕ್ಷರಾಗಿ ರಂಜನ್ ಆಯ್ಕೆಯಾಗಿದ್ದಾರೆ. 

ಟಿ.ಎನ್. ಕೋಟೆ ಗ್ರಾ.ಪಂ. ಅಧ್ಯಕ್ಷರಾಗಿ ಓಬಳಮ್ಮ, ಉಪಾಧ್ಯಕ್ಷರಾಗಿ ಟಿ.ಡಿ. ಓಬಳೇಶ್, ಪಗಡಲಬಂಡೆ ಗ್ರಾ.ಪಂ. ಅಧ್ಯಕ್ಷರಾಗಿ ಉಮಾದೇವಿ, ಉಪಾಧ್ಯಕ್ಷರಾಗಿ ಎಸ್. ಶಿವಣ್ಣ, ಸಿರಿವಾಳ ಓಬಳಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಎಸ್. ಆನಂದಮೂರ್ತಿ, ಉಪಾಧ್ಯಕ್ಷರಾಗಿ ಸುಮಲತಾ, ಸಿದ್ದೇಶ್ವರನ ದುರ್ಗ ಗ್ರಾ.ಪಂ. ಅಧ್ಯಕ್ಷರಾಗಿ ಲಕ್ಷ್ಮಿದೇವಿ, ಉಪಾಧ್ಯಕ್ಷರಾಗಿ ಕೆ.ಎಂ. ಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆ.

ದೊಡ್ಡಚೆಲ್ಲೂರು ಗ್ರಾ.ಪಂ. ಅಧ್ಯಕ್ಷೆಯಾಗಿ ಸುಮಾ, ಉಪಾಧ್ಯಕ್ಷರಾಗಿ ಸಿ. ಪ್ರಸನ್ನಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗೆರೆ ಚುನಾವಣಾಧಿಕಾರಿ ಡಿ.ಟಿ. ಜಗನ್ನಾಥ್, ಪಿಡಿಒ ಗುಂಡಪ್ಪ, ಸಾಣಿಕೆರೆ ಚುನಾವಣಾಧಿಕಾರಿ ಮೋಹನ್ ಕುಮಾರಿ, ಪಿಡಿಒ ದೇವರಾಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

error: Content is protected !!