ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ನೇತ್ರಾವತಿ, ಉಪಾಧ್ಯಕ್ಷರಾಗಿ ಚಂದ್ರಪ್ಪ

ಮಲೇಬೆನ್ನೂರು, ಫೆ.11- ಭಾನುವಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ನೇತ್ರಾವತಿ ಕೊಟ್ರೇಶ್ ಮತ್ತು ಉಪಾಧ್ಯಕ್ಷರಾಗಿ ಕೋಣನತಲೆ ಚಂದ್ರಪ್ಪ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನೇತ್ರಾವತಿ ಕೊಟ್ರೇಶ್ 12 ಮತಗಳನ್ನು ಪಡೆದು  ಆಯ್ಕೆಯಾದರೆ, ಮಂಜುಳಾ ವೀರೇಶ್ ಅವರು ಕೇವಲ 1 ಮತದ ಅಂತರದಿಂದ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಪ್ಪ ಅವರು ಸಹ 12 ಮತಗಳಿಂದ ಆಯ್ಕೆಯಾದರೆ, ವೆಂಕಟೇಶ್ ರೆಡ್ಡಿ 11 ಮತಗಳನ್ನು ಪಡೆದು ಪರಾಭವಗೊಂಡರು.

ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ನಾಗರಾಜ್ ಸಾರಥಿ ಹಾಜರಿದ್ದರು.

error: Content is protected !!