ದಾಖಲೆ ಸಮೇತ ಚರ್ಚೆಗೆ ಬರಲಿ

ದಾವಣಗೆರೆ, ಜು.4- ಕಾಂಗ್ರೆಸ್ ನಾಯಕರ ಹಗರಣಗಳಿವೆ ಎಂದು ಹೇಳುವ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಅದನ್ನು ದಾಖಲೆ ಸಮೇತ ನಾಳೆಯೇ ಬಹಿರಂಗ ಚರ್ಚೆಗೆ ಬರಲಿ. ನಾವುಗಳು ಅದಕ್ಕೆ ಸಿದ್ಧರಿದ್ದೇವೆ. ನಮ್ಮ ಬಳಿಯೂ ಅವರ ಹಗರಣಗಳ ದಾಖಲೆಗಳಿದ್ದು ಬಯಲು ಮಾಡುತ್ತೇವೆ  ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

 ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ ಅವರು ಭೀಮಸಮುದ್ರದ ಭೀಮ ಎಂದು ಯಶವಂತರಾವ್ ಹೇಳಿದ್ದಾರೆ. ಸಂಸದ ಸಿದ್ದೇಶ್ವರ ಭೀಮನಲ್ಲ, ದುರ್ಯೋಧನ ಆಗಿದ್ದಾರೆ. ನಮ್ಮ ನಾಯಕರ ಬಗ್ಗೆ ಆರೋಪಗಳನ್ನು ಮಾಡುವುದಿದ್ದರೆ ಸ್ವತಃ ಬಂದು ಹೇಳಲಿ. ಅದು ಬಿಟ್ಟು ನಕುಲ-ಸಹದೇವರನ್ನು ಕಳುಹಿಸುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಮುಖಂಡ ಹೆಚ್. ದುಗ್ಗಪ್ಪ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜು ಜಿಲ್ಲೆಗೆ ಮಂಜೂರಾಗಿರುವುದನ್ನು ಎಸ್ಸೆಸ್ ಸ್ವಾಗತಿಸಿದ್ದಾರೆ. ಆದರೆ, ಅವರ ಮೇಲೆ ಯಶವಂತರಾವ್ ಮಾಡಿರುವ ಆರೋಪ ಸತ್ಯಕ್ಕೆ ದೂರ. ಜಿಲ್ಲೆಗೆ ಇನ್ನೊಂದಲ್ಲ, ಎರಡು ಮೆಡಿಕಲ್ ಕಾಲೇಜ್ ಬಂದರೆ ಅದು ಪ್ರತಿಭ್ವಾನಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ, ಬಾಪೂಜಿ ಸಂಸ್ಥೆ ಅಥವಾ  ಎಸ್ಸೆಸ್ ಗೆ ನಷ್ಟವಿಲ್ಲ ಎಂದು ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ,  ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಮುಖಂಡರಾದ ಕೆ.ಎಸ್. ಬಸವಂತಪ್ಪ, ಕೆ.ಜಿ. ಶಿವಕುಮಾರ್, ಮಾಲತೇಶರಾವ್ ಜಾಧವ್, ಅಯೂಬ್ ಪೈಲ್ವಾನ್, ವಿನಾಯಕ ಪೈಲ್ವಾನ್, ಬಿ.ಹೆಚ್. ಉದಯಕುಮಾರ್, ಸೀಮೆಎಣ್ಣೆ ಮಲ್ಲೇಶ್, ಟಿ. ಯುವರಾಜ್ ಸೇರಿದಂತೆ ಇತರರು ಇದ್ದರು.

error: Content is protected !!