ದಾವಣಗೆರೆ, ಏ.8 – ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ `ಶಾಲಾ ಸಿದ್ದಿ ಯೋಜನೆ’ ಸಹಕಾರಿಯಾಗಲಿದೆ ಎಂದು ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜು ಹೇಳಿದರು.
ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ದಾವಣಗೆರೆ ವಿಜ್ಞಾನ ಕೇಂದ್ರದ ಸಹಯೋಗ ದಲ್ಲಿ ಏರ್ಪಡಿಸಿದ್ದ `ಶಾಲಾ ಸಿದ್ದಿ’ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ರೀತಿಯ ಕ್ಷಿಪ್ರ ಬೆಳ ವಣಿಗೆಗಳಾಗುತ್ತಿದ್ದು, ಶಾಲಾ ಮುಖ್ಯಸ್ಥರು ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದರು.
ರಾಜ್ಯದಲ್ಲಿ ಶಾಲಾ ಸಿದ್ದಿ ಕಾರ್ಯಕ್ರಮ ಅನುಷ್ಠಾ ನಗೊಳ್ಳಲಿದೆ. ಈ ಕಾರಣಕ್ಕಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಾಧನೆ ಪ್ರಗತಿ, ಬೆಳವಣಿಗೆ, ಶಾಲಾ ನಾಯಕತ್ವ ಮತ್ತು ನಿರ್ವಹಣೆ, ಶಾಲಾ ಸಂಪನ್ಮೂಲಗಳನ್ನು ಅನುವುಗೊಳಿಸುವುದು, ಬೋಧನೆ, ಕಲಿಕೆ ಮತ್ತು ಮೌಲ್ಯ ಮಾಪನ ಕುರಿತು ತರಬೇತಿ ನೀಡಿ ಆನ್‍ಲೈನ್ ಚಟುವಟಿಕೆಗಳನ್ನು ನಿರ್ವಹಿಸಲು ಶಿಕ್ಷಕರನ್ನು ಸದೃಢರನ್ನಾಗಿ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ್ ಮಾತನಾಡಿದರು.
ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ ಪ್ರಾರ್ಥಿಸಿದರು. ಸಮನ್ವಯಾಧಿಕಾರಿ ಬಿ.ಸುರೇಂದ್ರನಾಯ್ಕ್ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ಸಂಚಾಲಕ ಎಂ. ಗುರುಸಿದ್ದಸ್ವಾಮಿ ಕಾರ್ಯ ಕ್ರಮ ನಿರೂಪಿಸಿದರು, ಬಿಆರ್‍ಪಿ ಶೋಭ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ವಾಣಿ, ಯೋಗೇಂದ್ರನಾಥ್, ಅಶೋಕ, ಶೌಖತ್ ಅಲಿ,
ಎ.ಹೆಚ್. ವಿವೇಕಾನಂದ ಸ್ವಾಮಿ ಎನ್.ಎಂ. ಕೊಟ್ರಯ್ಯ ಭಾಗವಹಿಸಿದ್ದರು.