ದೇವಿಕೆರೆ ಗ್ರಾ.ಪಂ.ನಲ್ಲಿ ಬಿಜೆಪಿ – ಜೆಡಿಎಸ್ ದೋಸ್ತಿ

ಅಧ್ಯಕ್ಷರಾಗಿ ಸದಾಶಿವಪ್ಪ, ಉಪಾಧ್ಯಕ್ಷರಾಗಿ ಓಬಪ್ಪ ಆಯ್ಕೆ

ಜಗಳೂರು, ಫೆ.5 – ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಬಿ. ಸದಾಶಿವಪ್ಪ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ಓಬಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರವಿಚಂದ್ರ ಬಸವಾಪುರ ಹಾಗೂ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಸದಾಶಿವಪ್ಪ ಅವರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 22 ಸ್ಥಾನಗಳಿರುವ ಪಂಚಾಯಿತಿಯಲ್ಲಿ 14 ಸದಸ್ಯರುಗಳು ಸದಾಶಿವಪ್ಪ ಅವರಿಗೆ  ಮತ ಚಲಾಯಿಸಿದರು. ಕಾಂಗ್ರೆಸ್‍ನ ರವಿ ಚಂದ್ರ ಬಸವಾಪುರ ಅವರು 8 ಮತಗಳನ್ನು ಪಡೆದರು. 14 ಮತಗಳನ್ನು ಪಡೆದಿರುವ ಸದಾಶಿವಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಓಬಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಓಬಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣೆ ಅಧಿಕಾರಿ ಹಾಗೂ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್  ಘೋಷಿಸಿದರು.

ಬಿಜೆಪಿ-ಜೆಡಿಎಸ್ ದೋಸ್ತಿ : ಕಾಂಗ್ರೆಸ್‍ಗೆ ಮುಖ ಭಂಗ : ತಾಲ್ಲೂಕಿನಲ್ಲಿ ಹಾವು, ಮುಂಗಸಿಯಂತೆ ವರ್ತಿಸುತಿದ್ದ ಬಿಜೆಪಿ, ಜೆಡಿಎಸ್ ಮುಖಂಡರುಗಳು ಇದೇ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸೆಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ರವಿಚಂದ್ರ ಬಸವಾಪುರ, ದೇವಿಕೆರೆ ಗ್ರಾಪಂನಲ್ಲಿ ಕಳೆದ 15 ವರ್ಷಗಳಿಂದ ಸತತವಾಗಿ ಆಯ್ಕೆಯಾಗುತ್ತಾ ಪಂಚಾಯಿತಿಯಲ್ಲಿ ಅಧಿಕಾರ ನಡೆಸಿದ್ದರು. ಬಿಜೆಪಿ-ಜೆಡಿಎಸ್ ದೋಸ್ತಿಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. 

ಪೊಲೀಸ್ ಬಿಗಿ ಬಂದೋಬಸ್ತ್ : ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ್ ಹಾಗೂ ಸಿಪಿಐ ಡಿ.ದುರುಗಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮುಗಿಯುವವರೆಗೂ ಗ್ರಾ.ಪಂ ಕಛೇರಿ ಸುತ್ತ ನಿಷೇಧಾಜ್ಞೆ ಹೊರಡಿಸಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಬಿಜೆಪಿ ಮಂಡಲ ಅಧ್ಯಕ್ಷ  ಮಹೇಶ್ ಪಲ್ಲಾಗಟ್ಟೆ ಪ್ರತಿಕ್ರಿಯಿಸಿ, ದೇವಿಕೆರೆ ಗ್ರಾ.ಪಂ.ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮೇರೆಗೆ ಅಧ್ಯಕ್ಷರಾಗಿ ಸದಾಶಿವಪ್ಪ ಹಾಗೂ ಉಪಾಧ್ಯಕ್ಷರಾಗಿ ಓಬಪ್ಪ ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳಿಗೆ ಒತ್ತು ನೀಡಲಿದ್ದಾರೆ ಎಂದು ತಿಳಿಸಿದರು. 

ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಪ.ಪಂ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ವಿ ಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ರುದ್ರೇಶ್, ಮೋಹನ್, ಶೆಟ್ಟಿಗೊಂಡನಹಳ್ಳಿ ರಾಜು, ನಾಗರಾಜ್ ಸೇರಿದಂತೆ ಕಾರ್ಯಕರ್ತರು ಶುಭ ಕೋರಿದರು.

ಈ ಸಂದರ್ಭದಲ್ಲಿ ಪಿಡಿಓ ಸುಧೀಶ್, ಗ್ರಾ.ಪಂ ಸದಸ್ಯರಾದ ಶರಣಮ್ಮ, ನಾಗರಾಜ್, ಗುರುಸ್ವಾಮಿ, ರವಿಕುಮಾರ್, ಮಲ್ಲಮ್ಮ, ಇಂದಿರಮ್ಮ, ತಿಪ್ಪಮ್ಮ, ಅಂಜಿನಪ್ಪ, ಅಂಜಿನಮ್ಮ, ಶಾಂತಕುಮಾರ್, ಬಸವರಾಜಪ್ಪ, ಪಾರ್ವತಮ್ಮ, ರೇಖಮ್ಮ, ಚೌಡಮ್ಮ, ಕರಿಬಸಮ್ಮ, ಆರ್.ಎಂ ವೀರೇಶ್‍, ನೀಲಮ್ಮ, ಮಂಜಮ್ಮ, ಗಿರಿಜಮ್ಮ ಉಪಸ್ಥಿತರಿದ್ದರು.

error: Content is protected !!