ತರಳಬಾಳು ವಿದ್ಯಾಸಂಸ್ಥೆಯ ಉತ್ತಮ ಶಿಕ್ಷಕರಿಗೆ ಪ್ರಶಂಸನಾ ಪತ್ರ ವಿತರಣೆ

ಸಿರಿಗೆರೆ, ಫೆ.4- ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕೋವಿಡ್-19 ರ ಸಂಕಟದ ಸಮಯದಲ್ಲಿ ಯೂಟ್ಯೂಬ್ ಚಾನೆಲ್ ಮುಖಾಂತರ ಹೆಚ್ಚು ಪಾಠ ಬೋಧನೆ ಮಾಡಿ, ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಲಾಗುತ್ತಿದೆ ಎಂದು ಆಡಳಿತಾ ಧಿಕಾರಿ ಪ್ರೊ.ಎಸ್.ಬಿ.ರಂಗನಾಥ್ ತಿಳಿಸಿದರು.

ವಿದ್ಯಾಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶಿಕ್ಷಕರಿಗೆ ಮತ್ತು ಉಪನ್ಯಾಸಕರುಗಳಿಗೆ ಪ್ರಶಂಸನಾ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳು ಉತ್ತಮ ಸೇವೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅದರಲ್ಲೂ ಕೆಲ ವರಲ್ಲಿ ವಿಶೇಷತೆಯನ್ನು ಗುರುತಿಸಲಾಗಿದೆ. ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಬಳಸಿ ಕೊಂಡು ಉತ್ತಮ ಜ್ಞಾನ ದಾಸೋಹದ ಮಾಡಿರುತ್ತಾರೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿದ್ಯಾ ಸಂಸ್ಥೆಯ ಶಿಕ್ಷಕರಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಂತ್ರಜ್ಞಾನದ ಬಳಕೆ ಮಾಡಿ ಕೊಂಡು ಹೊಸದಾಗಿ ‘ಅಪ್ಲಿಕೇ ಷನ್’ ಸಿದ್ಧಪ ಡಿಸಿಕೊಂಡು ಶಿಕ್ಷ ಕರುಗಳಿಗೆ ಯೂಟ್ಯೂಬ್ ಲಿಂಕ್‍ ಗಳನ್ನು ಬಳಸುವ ಮಾಹಿತಿ ನೀಡಲಾಗಿತ್ತು.
ಸಮರ್ಪಕವಾಗಿ ಬಳಸಿ ಕೊಂಡಿದ್ದು ಶ್ಲಾಘನೀಯ ವಾದುದು ಎಂದರು.

ವಿಶೇಷಾಧಿಕಾರಿ ಡಾ.ಹೆಚ್.ವಿ.ವಾಮದೇವಪ್ಪ ಮಾತನಾಡಿ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಬಾರದು. ವಿದ್ಯಾರ್ಥಿಗಳಿಗೆ ಶಿಕ್ಷಕರ ಸೇವೆಯೇ ಮೊದಲ ಆದ್ಯತೆ ಪರಿಗಣಿಸಿ ಕ್ರಮಕೈಗೊಳ್ಳಲಾಗಿದೆ. ವಿದ್ಯಾಸಂಸ್ಥೆಯ ನಿಯಮಾನುಸಾರ ಸೆಪ್ಟಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ 75 ದಿನಗಳಲ್ಲಿ 138 ಯೂಟ್ಯೂಬ್ ಕ್ಲಾಸ್ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ 20 ಆಯ್ಕೆ ಮಾಡಿಕೊಂಡು ಪ್ರಶಂಸನಾ ಪತ್ರ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪಿ.ಶಿವಗಂಗಮ್ಮ, ಬಿ.ಜಿ.ಗೋವರ್ದನ, ಬಿ.ಶಶಿಕಲಾ, ಈ.ದೇವರಾಜು, ಎಜಿಎಮ್.ಪದ್ಮಾವತಿ, ಹರ್ಷಿತಾ, ಬಿ.ಎಂ.ಪ್ರವೀಣ, ಎಸ್.ಶಿವಕುಮಾರ್, ಜೆ.ಎಂ.ನವೀನ್, ಆರ್.ವಿದ್ಯಾಶ್ರೀ, ಸಿ.ಬಸವಕುಮಾರ, ಜಿ.ಜೆ.ಸತೀಶ್, ಬಿ.ಎಸ್.ಅರುಣ್‍ಕುಮಾರ್, ಎನ್.ಸಂದ್ಯಾ, ಕೆ.ಆರ್.ಬಸವರಾಜು, ಎಸ್.ಗೀತಮ್ಮ, ಹೆಚ್.ಕೋಮಲಾ, ಕೆ.ಎನ್.ನಟರಾಜು, ಎಂ.ಪ್ರಮೀಳಾ, ಎಂ.ಎಲ್.ಸುದರ್ಶನ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.

error: Content is protected !!