ಡಿಕೆಶಿಗೆ ದೂರು ನೀಡಿದ ಪುರಸಭಾ ಸದಸ್ಯರು

ಹರಪನಹಳ್ಳಿ, ಫೆ.3 – ಇಲ್ಲಿಯ ಪುರಸಭಾ ಸದಸ್ಯರು ತಾಲ್ಲೂಕು ಕಾಂಗ್ರೆಸ್ ಪಕ್ಷದಲ್ಲಿ ತಾಂಡವವಾಡುತ್ತಿರುವ ಗುಂಪುಗಾರಿಕೆ ಕುರಿತು ಇಲ್ಲಿನ ಪುರಸಭೆಯ ಕಾಂಗ್ರೆಸ್ ಸದಸ್ಯರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.  

ಚಿತ್ರದುರ್ಗಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‍ ಅವರನ್ನು  ಇಲ್ಲಿಯ ಪುರಸಭಾ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್‍, ಉದ್ದಾರ ಗಣೇಶ್‍, ಟಿ.ವೆಂಕಟೇಶ್‍ ಹಾಗೂ ಮುಖಂಡ ಚಿಕ್ಕೇರಿ ಬಸಪ್ಪ ಅವರುಗಳು ಪಕ್ಷದಲ್ಲಿನ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪುರಸಭಾ ಸದಸ್ಯ ಎಂ.ವಿ.ಅಂಜಿನಪ್ಪ ಅವರು ಹರಪನಹಳ್ಳಿ ಪ್ರಸ್ತುತ ರಾಜಕಾರಣದ ಬಗ್ಗೆ ಚರ್ಚೆ ಮಾಡಿದೆವು, ಇಲ್ಲಿ ಗುಂಪುಗಾರಿಕೆ ಇರುವ ವಿಚಾರವನ್ನು ಗಮನಕ್ಕೆ ತಂದೆವು, ಲೋಕಸಭಾ ಚುನಾವಣೆಯಲ್ಲಿ ಯಾರು ವಿರೋಧ ಮಾಡಿದ್ದಾರೆ, ಪಕ್ಷದಲ್ಲಿ ಯಾರು ಗುಂಪುಗಾರಿಕೆ ಸೃಷ್ಠಿ ಮಾಡಿದ್ದಾರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕಾರ್ಯವೈಖರಿ ಸೇರಿದಂತೆ ಇತರೆ ವಿಚಾರಗಳನ್ನು ಗಮನಕ್ಕೆ ತಂದಿದ್ದೇವೆ ಎಂದರು.

ನಮ್ಮ ಮಾತನ್ನು ಆಲಿಸಿದ ಡಿ.ಕೆ.ಶಿವಕುಮಾರ್‍ ಅವರು, ಆದಷ್ಟು ಬೇಗ ವ್ಯತ್ಯಾಸ ಸರಿಪಡಿಸುತ್ತೇನೆ, ಯಾವುದೇ ಗುಂಪುಗಾರಿಕೆಗೆ ಅವಕಾಶ ಕೊಡುವುದಿಲ್ಲ ಎಂದು  ಅಂಜಿನಪ್ಪ ಮತ್ತಿತರರು ತಿಳಿಸಿದ್ದಾರೆ.

ವ್ಯಕ್ತಿಗಿಂತ ಪಕ್ಷ ಮುಖ್ಯ ನಮಗೆ, ಎಲ್ಲರನ್ನೂ ಸಮನಾಗಿ ಕಾಣುತ್ತೇವೆ. ಯಾರಿಗೂ ತಾರತಮ್ಯ ಮಾಡಲ್ಲ ಪಕ್ಷದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸವಿದ್ದರೆ ಸರಿಪಡಿಸುತ್ತೇವೆ, ಎಲ್ಲರಿಗೂ ಗುರುತಿಸಲು ಅವಕಾಶ ಮಾಡಿಕೊಡುತ್ತೇವೆ ಮುಂದಿನ ದಿನಗಳಲ್ಲಿ ಹಿರಿಯ ಮುಖಂಡರ ಬಳಿ ಚರ್ಚೆ ಮಾಡಿ ಸರಿಪಡಿಸುತ್ತೇನೆ ಎಂದು ಹೇಳಿದರು ಎಂದು ಅಂಜಿನಪ್ಪ ವಿವರಿಸಿದ್ದಾರೆ.

error: Content is protected !!