ರಾಣೇಬೆನ್ನೂರು, ಫೆ. 2- ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಕಾಯಕ ಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಮಡಿವಾಳ ಸಮಾಜಕ್ಕೆ ಅಪಾರವಾಗಿದೆ. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ ಮಾಚಿದೇವರು ಅಮರರಾಗಿದ್ದಾರೆ ಎಂದು ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.
ನಗರದ ಮಿನಿ ವಿಧಾನಸೌಧದ ಸಭಾಂಗ ಣದಲ್ಲಿ ರಾಜ್ಯ ಸರ್ಕಾರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿವಿಧ ಮಡಿವಾಳ ಸಂಘಗಳ ಮತ್ತು ತಾಲ್ಲೂಕು ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳ ನೇತೃತ್ವದಲ್ಲಿ ಸರಳ ಹಾಗೂ ವಿಧ್ಯುಕ್ತವಾಗಿ ಏರ್ಪಡಿಸಿದ್ದ ಕಾಯಕ ಯೋಗಿ ಶ್ರೀ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕಕ್ಕೆ ಇನ್ನೊಂದು ಹೆಸರೇ ಮಾಚಿ ದೇವರು ಆಗಿದ್ದರು. ಅಂತಹ ಶರಣರ ಆದ ರ್ಶಗಳನ್ನು ಸರ್ವರೂ ಜೀವನದಲ್ಲಿ ರೂಢಿಸಿ ಕೊಂಡು ಮುನ್ನಡೆಯಬೇಕು. ಭಕ್ತಿಯಿಂದ ಸಾಮಾಜಿಕ ಸುವ್ಯವಸ್ಥೆ, ಧಾರ್ಮಿಕ, ಶರಣ ಸಂಸ್ಕೃತಿಯ ಮೂಲಕ ಮರೆಯಲಾರದಂತಹ ಕೊಡುಗೆಯನ್ನು ಮಾಚಿದೇವರು ನೀಡಿದ್ದಾರೆ. ಯಾವುದೇ ಶರಣರನ್ನು ಧಾರ್ಮಿಕ ಪಂಥಕ್ಕೆ, ಜಾತೀಯತೆಗೆ ಸೀಮಿತಗೊಳಿ ಸದೆ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಾಗಿದಾಗ ನೆಮ್ಮದಿಯ ಜೀವನ ಕಾಣಲು ಸಾಧ್ಯ ಎಂದು ಏಕನಾಥ ಹೇಳಿದರು.
ನ್ಯಾಯವಾದಿ ಹಾಗೂ ನೋಟರಿ ಕುಮಾರ ಮಡಿವಾಳರ ಮಾತನಾಡಿ, ಇದೀಗ ಮಾಚಿದೇವರ 146 ವಚನಗಳು ಮಾತ್ರ ಲಭ್ಯ ವಾಗಿವೆ. ಇನ್ನೂ ಇವರ ವಚನಗಳು ಸಾಕ ಷ್ಟಿದ್ದು, ಅವುಗಳ ಶೋಧನೆ ನಡೆಯಬೇಕಿದೆ. ದೇಶದ 18 ರಾಜ್ಯಗಳಲ್ಲಿ ಈ ಮಡಿವಾಳ ಸಮಾಜವು ಪ.ಜಾತಿಗೆ ಸೇರ್ಪಡೆಗೊಂಡಿದ್ದು, ಕರ್ನಾಟಕದಲ್ಲೂ ಪ.ಜಾತಿ ಮೀಸಲಿಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶೀಘ್ರವೇ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಶಂಕರ ಜಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಬಟ್ಟೆಗಳನ್ನು ಮಡಿ ಮಾಡಿ, ಶುದ್ಧಿಗೊಳಿಸುವುದಷ್ಟೇ ಅಲ್ಲ, ಮನಸ್ಸುಗಳನ್ನೂ ಮಡಿ ಮಾಡಿ ಶುದ್ಧ ಮಾಡುವ ಪ್ರಾಮಾಣಿಕ ಕಾಯಕವನ್ನು ಮಡಿವಾಳ ಸಮಾಜದವರು ಮಾಡುತ್ತಿದ್ದಾರೆ. ಜನಾಂಗದವರು ಎಳ್ಲಾ ಹಂತದಲ್ಲೂ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಬಾಳಬೇಕು ಎಂದರು.
ಜಿ.ಪಂ. ಸದಸ್ಯ ಶಿವಾನಂದ ಕನ್ನಪ್ಪಳವರ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ತಾ.ಪಂ.ನ ಸನಿ ಅಶೋಕ ನಾರಜ್ಜಿ, ಅರುಣ ಕಾರ್ಗಿ, ಎ.ಬಿ. ಚಂದ್ರಶೇಖರ, ತಾಲ್ಲೂಕು ಅಧ್ಯಕ್ಷ ಮಂಜುನಾಥ ಬಸಪ್ಪ ಮಡಿವಾಳರ, ನಗರಾಧ್ಯಕ್ಷ ರಾಜು ಮಡಿವಾಳರ, ಟ್ರಸ್ಟ್ ಅಧ್ಯಕ್ಷ ಚಂದ್ರಣ್ಣ ಚಳಗೇರಿ, ವೀರಣ್ಣ ದೊಡ್ಡಮನಿ, ಡಿಳ್ಳೆಪ್ಪ ಮಡಿವಾಳರ, ಅಶೋಕ ಮಡಿವಾಳರ, ಈರಪ್ಪ ಮಡಿವಾಳರ, ಎಂ. ಚಿರಂಜೀವಿ, ಹನುಮಂತಪ್ಪ ಮಡಿವಾಳರ, ಮಾಲತೇಶ ಮಡಿವಾಳರ, ಗುಡ್ಡಪ್ಪ ಮಡಿವಾಳರ, ನಾಗರಾಜ ಮಡಿವಾಳರ, ಮಧು ಮಡಿವಾಳರ, ಶಾರದಾ ಮಡಿವಾಳರ, ಚಂದ್ರಶೇಖರ ಮಡಿವಾಳರ, ಪ್ರವೀಣ ಸಾಗರ, ರುದ್ರವ್ವ ಮಡಿವಾಳರ, ಜುಂಜಪ್ಪ ಮಡಿವಾಳರ, ಕಸ್ತೂರಿ ಮಡಿವಾಳರ, ಸುರೇಶ ಮಡಿವಾಳರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.