ಕುಂದುವಾಡ ಕೆರೆಯ ಅಭಿವೃದ್ಧಿಯಲ್ಲಿ ಯಾವುದು ಬೇಕು ? ಯಾವುದು ಬೇಡ ?

ಕೆರೆ ಅಭಿವೃದ್ಧಿಗೇನು ಬೇಕು? ದಾವಣಗೆರೆ ನಗರದ ಕುಂದುವಾಡ ಕೆರೆಯನ್ನು ಅಭಿವೃದ್ಧಿ ನೆಪದಲ್ಲಿ ಹಾಳುಗೆಡವಲಾಗುತ್ತಿದೆ. 

  • ಪಾದಚಾರಿ ದಾರಿ ಅಗಲೀಕರಣ ಬೇಡವೇ ಬೇಡ. ಅದು ಮೈಸೂರಿನ ಕುಕ್ಕರಳ್ಳಿ ಕೆರೆಯ ಏರಿಗಿಂತ ಎರಡು ಪಟ್ಟು ಹಗಲವಿದೆ.
  • ಪ್ರಕೃತಿದತ್ತವಾದ ತಾಣವನ್ನು ಮೋಜಿನ ತಾಣವಾಗಿ ಮಾರ್ಪಡಿಸುವುದು ಬೇಡ.
  • ಕೆರೆ ಏರಿಯನ್ನು ಹೊರಗಡೆಯಿಂದ ಗಟ್ಟಿ ಮಾಡಲಿ.
  • ಕೆರೆಗೆ ಸೇರುತ್ತಿರುವ ಕೊಳಚೆ ನೀರಿನ ಗಟಾರವನ್ನು ಒಳಚರಂಡಿ ಯೋಜನೆಯಂತೆ ಮಾಡಿ ಗಲೀಜು ನೀರು ಹರಿಯುವುದನ್ನು ನಿಲ್ಲಿಸಲಿ.
  • ಕುಡಿಯುವ ನೀರನ್ನು ಬಳಸಿ ಹುಲ್ಲು ಹಾಸು ನಿರ್ವಹಣೆ ಖಂಡಿತ ಬೇಕಿಲ್ಲ. ಅಮೇರಿಕಾದಂತಹ ಮುಂದುವರೆದ ದೇಶಗಳಲೆಲ್ಲ ಲಾನ್ ನಿರ್ವಹಣೆ ಅತ್ಯಂತ ದುಬಾರಿ ಹಾಗೂ ಪರಿಸರ ಮಾಲಿನ್ಯ ಎಂದು ನಿಷೇಧಿಸಲಾಗಿದೆ.
  • ಈಗಾಗಲೇ ಬೆಳೆದಿರುವ ಮರ-ಗಿಡಗಳನ್ನು ಉಳಿಸಿಕೊಂಡು ಇನ್ನೂ ಹೆಚ್ಚಿನ ಮರಗಳಲ್ಲಿ ಒಂದನ್ನೂ ಕಡಿಯದೆ ಎಲ್ಲವನ್ನು ಉಳಿಸಿ, ಬೆಳೆಸಲು ಕ್ರಮ ಕೈಗೊಳ್ಳಲಿ.
  • ವಾಯುವಿಹಾರದ ಜಾಗದಲ್ಲಿ ಸೈಕಲ್‍ಟ್ರ್ಯಾಕ್ ಬೇಡವೇ ಬೇಡ.
  • ಕುಂದುವಾಡ ಕೆರೆಯ ಜಾಗವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಿಸಬೇಕು.
  • ಇಲ್ಲಿ ಯಾವುದೇ ರೀತಿಯ ವಿದ್ಯುದೀಕರಣಕ್ಕೆ ಅವಕಾಶ ಕೊಡದೇ ಈಗಿರುವ ಪರಿಸರವನ್ನು ನಿರ್ವಹಣೆ ಮಾಡಬೇಕು.
  • ಕುಂದುವಾಡ ಕೆರೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಕ್ತ ತಜ್ಞರ ಸಮಿತಿ ರಚಿಸಬೇಕು.

ದಿನಾಂಕ 1-02-2021ರ ಪ್ರಜಾವಾಣಿ ಪತ್ರಿಕೆಯಲ್ಲಿನ ಕಾಂಗ್ರೆಸ್ ಹೇಳಿಕೆಯಂತೆ ಕೆರೆಯ ಎಲ್ಲಾ ಕಾಮಗಾರಿಗಳನ್ನು 3 ಕೋಟಿಯಲ್ಲಿಯೇ ಮುಗಿಸಬಹುದು. ಇದಕ್ಕಾಗಿ ವೃಥಾ ಹಣ ಖರ್ಚು ಸಲ್ಲದು. ಉಳಿದ 10 ಕೋಟಿ ಹಣವನ್ನು ಮುಂದಿನ ಮೇ, ಜೂನ್, ಜುಲೈ ತಿಂಗಳಲ್ಲಿ ಮನೆಗೆರಡು ಮರ ನೆಡುವ ಕಾನೂನನ್ನು ಜಾರಿಗೊಳಿಸುವಲ್ಲಿ ಮುಂದಾಗಬೇಕೆಂದು ಸವಿನಯ ವಿನಂತಿ.  

– ಗೋಪಾಲಗೌಡ, ಎಂ. ಸಿದ್ದಯ್ಯ, ವಕೀಲರು, ಶಿವನಕೆರೆ ಬಸವಲಿಂಗಪ್ಪ.

 

error: Content is protected !!