ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ಎ.ಕೆ. ಕಾಲೋನಿ ವಾಸಿ ದಿ.ಬುಡ್ಡಣ್ಣನವರ ಮೈಲಾರಪ್ಪನವರ ಧರ್ಮಪತ್ನಿ ಶ್ರೀಮತಿ ಗುತ್ತ್ಯೆಮ್ಮ (92) ಇವರು ದಿನಾಂಕ 19.01.2021 ರ ಮಂಗಳವಾರ ಮಧ್ಯಾಹ್ನ 2.40ಕ್ಕೆ ನಿಧನರಾದರು. ಜಿಗಳಿ ಹಾ.ಉ.ಸ. ಸಂಘದ ನಿವೃತ್ತ ಕಾರ್ಯದರ್ಶಿ ಬಿ.ಬಾಲಪ್ಪ ಸೇರಿದಂತೆ ಐವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.1.2021 ರ ಬುಧವಾರ ಬೆಳಿಗ್ಗೆ 12 ಗಂಟೆಗೆ ಜಿಗಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 31, 2025