ದಾವಣಗೆರೆ, ಜ.5- ಜಿಲ್ಲೆಯಲ್ಲಿಯೇ ಮಹೇಶ್ವರ ಜಾತ್ರೆಗೆ ಪ್ರಸಿದ್ಧವಾದ ಸ್ಥಳ ಬಸಾಪುರ, ಹತ್ತಾರು ವರ್ಷಗಳಿಂದ ತನ್ನದೇ ಆದ ವೈಭವವನ್ನು ಹೊಂದಿದ್ದ ಬಸಾಪುರದ ಮಹೇಶ್ವರ ಜಾತ್ರೆ ಈ ವರ್ಷ ಕೊರೊನಾ ಕಾರಣದಿಂದ ಕೇವಲ ಮೊದಲ ದಿನದ ಮಹಾಪಂಕ್ತಿಗೆ ಮಾತ್ರ ಸೀಮಿತವಾಗಿ ಜಾತ್ರೆಯ ಕಳೆ ಕಳೆದುಕೊಂಡಿದೆ.
ಪ್ರತಿವರ್ಷ ಭಕ್ತರಿಗೆ ಮೊದಲ ದಿನ ಅನ್ನ, ಹಾಲು, ಬಾಳೆಹಣ್ಣು, ಸಕ್ಕರೆ ಹಾಗೂ ಎರಡನೇ ದಿನ ಅನ್ನ, ಸಾಂಬಾರ್, ಮಜ್ಜಿಗೆ ಸಾಂಬಾರ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಗ್ರಾಮಸ್ಥರಿಗೆ ನೋವು ತಂದಿತು. ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಮಹೇಶ್ವರ ಜಾತ್ರೆ, ಕಾರ್ತಿಕಗಳು ನಡೆಯುತ್ತಿದ್ದರೂ ನಮ್ಮ ಗ್ರಾಮದಲ್ಲಿ ಮಾತ್ರ ಜಾತ್ರೆ ನಡೆಸುವಲ್ಲಿ ಮಹೇಶ್ವರ ಸಮಿತಿ ವಿಫಲವಾಗಿರುವುದು ವಿಪರ್ಯಾಸ ಎಂಬುದು ಜನರ ಅಭಿಪ್ರಾಯವಾಗಿತ್ತು.