ನಂದಿ ಸೌಹಾರ್ದ ಸಹಕಾರಿ ಚುನಾವಣೆ

ಮೂವರು ಪುನರಾಯ್ಕೆ, 11 ಜನ ಹೊಸಬರಿಗೆ ಗೆಲುವು

ಮಲೇಬೆನ್ನೂರು, ಜ.3- ಇಲ್ಲಿನ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಇಂದು ನಡೆದ ಚುನಾವಣೆಯಲ್ಲಿ ಮೂವರು ಪುನರಾಯ್ಕೆಯಾಗಿದ್ದು, 11 ಜನ ಹೊಸದಾಗಿ ಗೆಲುವು ಸಾಧಿಸಿದ್ದಾರೆ. 

ಒಟ್ಟು 15 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಹಳ್ಳಿಹಾಳ್ ಗ್ರಾಮದ ತಿಪ್ಪೇಶಪ್ಪ ಅವಿರೋಧ ಆಯ್ಕೆಯಾಗಿದ್ದರು. ಉಳಿದ 14 ಸ್ಥಾನಗಳಿಗೆ  ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಜಿಗಳಿಯ ಇಂದೂದರ್, ಗೌಡ್ರ ಬಸವರಾಜಪ್ಪ, ಎಂ.ವಿ.ನಾಗ ರಾಜ್, ಹಳ್ಳಿಹಾಳ್ ಗ್ರಾಮದ ಹೆಚ್.ಟಿ.ಶಾಂತನಗೌಡ, ಹೆಚ್.ಟಿ.ಪರಮೇಶ್ವರಪ್ಪ, ಹೆಚ್.ವೀರನಗೌಡ, ಕೊಕ್ಕನೂರಿನ ಕೆ.ಹೆಚ್.ಆಂಜನೇಯ ಪಾಟೀಲ್, ಬಿ.ಹೆಚ್.ರವಿ, ಜಿ.ಬೇವಿನಹಳ್ಳಿಯ ಸಂತೋಷ್ ಪಾಳ್ಯದ, ಮಹಿಳಾ ಮೀಸಲು ಕ್ಷೇತ್ರದಿಂದ ಜಿ.ಬೇವಿನಹಳ್ಳಿಯ ಶೋಭಾ ಜಿ.ಜಿ ಪಾಲಾಕ್ಷಪ್ಪ, ಹಿಂಡಸಘಟ್ಟಿಯ ಭಾಗ್ಯ ಎಂ.ಬಿ.ಉದಯಕುಮಾರ್, ಬಿಸಿಎಂ `ಎ’ ಕ್ಷೇತ್ರದಿಂದ ಮಲೇಬೆನ್ನೂರಿನ ಎ.ಆರೀಫ್ ಅಲಿ, ಕೊಕ್ಕನೂರಿನ ಟಿ.ರಾಮಚಂದ್ರಪ್ಪ, ಎಸ್ಟಿ ಮೀಸಲು ಕ್ಷೇತ್ರದಿಂದ ಕೊಕ್ಕನೂರಿನ ಆರ್.ನಾಗರಾಜ್ ಆಯ್ಕೆಯಾಗಿದ್ದಾರೆ. 

ಜಿಗಳಿಯ ಇಂದೂಧರ್, ಹಳ್ಳಿಹಾಳ್ ವೀರನಗೌಡ, ಮಲೇಬೆನ್ನೂರಿನ ಎ.ಆರೀಫ್ ಅಲಿ ಪುನರಾಯ್ಕೆಗೊಂಡರೆ, ಸಂಘದ ಮಾಜಿ ಅಧ್ಯಕ್ಷ ಬಿ.ವೀರಯ್ಯ, ಜಿ.ಎಂ.ವಿಜಯಕುಮಾರ್ ಮತ್ತು ಎಂ.ಎನ್.ರಾಜು ಮತ್ತಿತರೆ ಪ್ರಮುಖರು ಪರಾಭವಗೊಂಡರು.

ಮಾಲತೇಶ್ ಪಬ್ಲಿಕ್ ಶಾಲೆಯಲ್ಲಿ ಚುನಾವಣೆ ನಡೆಯಿತು. ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 2202 ಮತದಾರರು ಮತದಾನ ಮಾಡಿದ್ದರು.

ಹಳ್ಳಿಹಾಳ್ ಹೆಚ್.ಟಿ.ಪರಮೇಶ್ವರಪ್ಪ 1202 ಮತಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ. ಚುನಾವಣೆ ವೇಳೆ ಪಿಎಸ್ಐ ವೀರಬಸಪ್ಪ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಮಾಡಲಾಗಿತ್ತು. 

ರಿಟರ್ನಿಂಗ್ ಅಧಿಕಾರಿಯಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಮಂಜಪ್ಪ ಕಾರ್ಯ ನಿರ್ವಹಿಸಿದರು.

error: Content is protected !!