ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ
ದಾವಣಗೆರೆ, ಫೆ. 24 – ಭಾರತ ಪರಕೀ ಯರ ದಾಳಿಗೆ ಗುರಿಯಾದರೂ, ತನ್ನ ಪರಂಪರೆ ಯನ್ನು ಸಹಸ್ರಾರು ವರ್ಷಗಳಿಂದ ಉಳಿಸಿ ಕೊಂಡು ಬಂದಿದೆ. ಗುರುಗಳು, ಮಠಗಳು ಹಾಗೂ ದೇವ ಸ್ಥಾನಗಳಿಂದಾಗಿ ದೇಶದ ಪರಂಪರೆ ಉಳಿದಿದೆ ಎಂದು ಬ್ರಹ್ಮಾಕುಮಾರಿ ಈಶ್ವ ರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಹೇಳಿದ್ದಾರೆ.
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ §ಸಂತ ಮಹಾತ್ಮರ ಅಧ್ಯಾತ್ಮಿಕ ಕೊಡುಗೆ¬ ವಿಷಯ ಕುರಿತು ಆಯೋಜಿಸಲಾಗಿದ್ದ ಸ್ವಾಮೀಜಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಧ್ಯಾನ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮನುಷ್ಯನಿಗೆ ಅಧ್ಯಾತ್ಮ ಜ್ಞಾನ ಬೇಕು. ಅಂತಹ ಜ್ಞಾನ ಪರಿಮಳವನ್ನು ಭಾರತ ವಿಶ್ವಕ್ಕೆ ನೀಡುತ್ತಾ ಬಂದಿದೆ. ದೇಶದ ಮೇಲೆ ಹಲವು ಬಾರಿ ದಾಳಿ, ಪರಕೀಯರ ಆಡಳಿತ ನಡೆದರೂ ಸಹ ಸಂಸ್ಕೃತಿ ಹಾಳಾಗಲು ಬಿಡಲಿಲ್ಲ ಎಂದವರು ಹೇಳಿದರು.
ಮುಂಬರುವ 2036ರ ವೇಳೆಗೆ ಸ್ವರ್ಣಿಮ ಕಾಲ ಬರಲಿದೆ, ದೇಶ ಸತ್ಯಯುಗ ಕಾಣಲಿದೆ. ದೇವತೆಗಳ ಆಡಳಿತ ಬರುತ್ತದೆ. ನಾವು ನಾಗರಿಕರು ದೇವಮಾನವರಾಗುತ್ತೇವೆ ಎಂದು ರಾಜಋಷಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆಯ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ, ಸತ್ಯಯುಗ ಬಂದೇ ಬರುತ್ತದೆ. ಸತ್ಯದಿಂದಲೇ ಶಕ್ತಿ ಬರುವುದರಿಂದ ನಾವು ಸತ್ಯವಂತರಾಗಿ ಇರಬೇಕು. ಅಂತರಂಗ ಹಾಗೂ ಬಹಿರಂಗವಾಗಿ ಸತ್ಯವಾಗಿರುವುದೇ ಪರಿಪೂರ್ಣ ಯೋಗ ಎಂದು ಹೇಳಿದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಆಧುನಿಕತೆಯಿಂದ ಬಹಿರಂಗ ಸಮೃದ್ಧಿ ಹಾಗೂ ಅಧ್ಯಾತ್ಮದಿಂದ ಅಂತರಂಗ ಸಮೃದ್ಧಿ ಸಿಗುತ್ತದೆ. ನಮಗೆ ಎರಡೂ ರೀತಿಯ ಸಮೃದ್ಧಿಗಳು ಬೇಕು. ಭಾರತ ಅಧ್ಯಾತ್ಮಕ ಸಂಪತ್ತು ಹೊಂದಿದೆ ಎಂದು ಹೇಳಿದರು.
ರಟ್ಟಿಹಳ್ಳಿಯ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೊಟ್ಟೆಗೆ ಅನ್ನದ ಹಸಿವಿದ್ದರೆ, ಆತ್ಮಕ್ಕೆ ಆನಂದದ ಹಸಿವು ಇರುತ್ತದೆ. ದುರ್ಲಭವಾದ ಮನುಷ್ಯ ಜನ್ಮ ಸಿಕ್ಕಾಗ ಜ್ಞಾನ ಸಂಪಾದನೆ ಮಾಡಬೇಕು. ಭಗವಂತನ ಸಾಕ್ಷಾತ್ಕಾರ ಮಾಡದ ಬದುಕು ವ್ಯರ್ಥ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಧಾರ್ಮಿಕ ವಿಭಾಗದ ಸಂಪರ್ಕಾಧಿಕಾರಿ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥ್‌ಜಿ, ನಾವು ಕರ್ಮ ಮಾಡಲು ಪ್ರಕೃತಿಗೆ ಬಂದಿದ್ದೇವೆ. ಕರ್ಮವು ಧಾರ್ಮಿಕವಾಗಿರಬೇಕು ಎಂದು ತಿಳಿಸಿದರು.
ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ನಗರ ಸಂಚಾಲಕಿ ಬ್ರಹ್ಮಾಕುಮಾರಿ ಲೀಲಾಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿಂದಿಗೆರೆಯ ಕರಡಿ ಗವಿಮಠದ ಶ್ರೀ ಶಿವಶಂಕರ್ ಶಿವಯೋಗಿ ಸ್ವಾಮೀಜಿ, ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶಾರದೇಶಾನಂದಜೀ ಮಹಾರಾಜ್, ಹೊನ್ನಾಳಿ ರಾಂಪುರ ಬೃಹನ್ಮಠದ ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮಿ, ಹದಡಿಯ ಶ್ರೀ ವಿದ್ಯಾವರೇಣ್ಯ ಶಿವಯೋಗೀಶ್ವರ ಮಠದ ಶ್ರೀ ಮುರಳೀಧರ ಸ್ವಾಮೀಜಿ, ಗೋಕಾಕದ ಹರಿದ್ವಾರ ಪತಂಜಲಿ ಪೀಠದ ಶ್ರೀ ಬ್ರಹ್ಮಲಿಂಗ ದೇವರು, ರಾಣೇಬೆನ್ನೂರು ಶಿವಾನಂದ ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ, ಹಳೇ ಕುಂದವಾಡದ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
ಸುರಭಿ ಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು.